ಪುಣೆ(ಮಹಾರಾಷ್ಟ್ರ):ಸಾಲ ಪಾವತಿಸದ ಹಿನ್ನೆಲೆಯಲ್ಲಿ ಪುಣೆಯ ಎನ್ಸಿಪಿ ಮುಖಂಡ ಧನಂಜಯ್ ಮುಂಡೆ ಫ್ಲಾಟ್ಗೆ ಬ್ಯಾಂಕ್ ಅಧಿಕಾರಿಗಳು ಮುತ್ತಿಗೆ ಹಾಕಿದ್ದಾರೆ.
70 ಲಕ್ಷ ರೂ. ಸಾಲ ಬಾಕಿ: ಎನ್ಸಿಪಿ ಮುಖಂಡನ ಫ್ಲಾಟ್ಗೆ ಬ್ಯಾಂಕ್ ಅಧಿಕಾರಿಗಳ ಮುತ್ತಿಗೆ! - NCP leader Dhananjay Munde news
ಸುಮಾರು 70 ಲಕ್ಷ ರೂ. ಸಾಲ ಪಾವತಿಸದ ಹಿನ್ನೆಲೆಯಲ್ಲಿ ಪುಣೆಯಲ್ಲಿರುವ ಎನ್ಸಿಪಿ(ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ) ಮುಖಂಡ ಧನಂಜಯ್ ಮುಂಡೆಯವರ ವಸತಿ ಗೃಹಕ್ಕೆ ಶಿವಾಜಿರಾವ್ ಭೋಸಲೆ ಸಹಕಾರಿ ಬ್ಯಾಂಕ್ ಅಧಿಕಾರಿಗಳು ಮುತ್ತಿಗೆ ಹಾಕಿದ್ದಾರೆ. ಈ ಬಗ್ಗೆ ಏನು ಮಾಡಬೇಕೆಂದು ನಾಳೆ ನಿರ್ಧರಿಸುತ್ತೇನೆ ಎಂದು ಧನಂಜಯ್ ಮುಂಡೆ ಹೇಳಿದ್ದಾರೆ.
ಪುಣೆಯಲ್ಲಿರುವ ಎನ್ಸಿಪಿ(ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ) ಮುಖಂಡ ಧನಂಜಯ್ ಮುಂಡೆಯವರ ವಸತಿ ಗೃಹಕ್ಕೆ ಶಿವಾಜಿರಾವ್ ಭೋಸಲೆ ಸಹಕಾರಿ ಬ್ಯಾಂಕ್ ಅಧಿಕಾರಿಗಳು ಮುತ್ತಿಗೆ ಹಾಕಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಧನಂಜಯ್ ಮುಂಡೆ, ಚುನಾವಣೆ ವಿಚಾರವಾಗಿ ನನಗೆ ಬಿಡುವಿಲ್ಲ. ಸಾಲದ ವಿಚಾರವಾಗಿ ಚುನಾವಣಾ ಪ್ರಕ್ರಿಯೆ ಮುಗಿದ ಬಳಿಕ ನಿಮ್ಮೊಂದಿಗೆ ಮಾತನಾಡುತ್ತೇನೆ ಎಂದು ಬ್ಯಾಂಕ್ ಅಧಿಕಾರಿಗಳಿಗೆ ಹೇಳಿದ್ದೆ. ಈ ಬಗ್ಗೆ ಏನು ಮಾಡಬೇಕೆಂದು ನಾಳೆ ನಿರ್ಧರಿಸುತ್ತೇನೆ ಎಂದು ಹೇಳಿದ್ದಾರೆ.
ಕಳೆದ ಅಕ್ಟೋಬರ್ 25ರಂದು ಬ್ಯಾಂಕ್, ಪತ್ರಿಕೆಯಲ್ಲಿ ಈ ಬಗ್ಗೆ ಪ್ರಕಟಣೆ ನೀಡಿತ್ತು. ಅಲ್ಲದೆ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ನಮೂದಿಸಿತ್ತು.