ಎರಡು ಬಾರಿ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡ ವಿವೇಕ್ ಜೋಶಿ, ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಿದವರು. ಹಾಗೂ ವಿಮಾನ ನಿಲ್ದಾಣಗಳಲ್ಲಿ ವಿಶೇಷ ಚೇತನರಿಗೆ ಸೌಲಭ್ಯ ಒದಗಿಸಲು ಹೋರಾಡಿದವರರು. ಸರಿಯಾಗಿ ಮಾತನಾಡಲು ಹಾಗೂ ನಡೆಯಲು ಸಾಧ್ಯವಾಗದಿದ್ದರೂ ವಿವೇಕ್ ಜೋಶಿ, ಎಲ್ಎಲ್ಬಿ, ಎಲ್ಎಲ್ಎಂ ಹಾಗೂ ಎಂಬಿಎ ಪದವಿ ಪಡೆದಿದ್ದು, ಇದೀಗ ಪಿಹೆಚ್‌ಡಿ ಮಾಡುತ್ತಿದ್ದಾರೆ.
ಅಂಗವಿಕಲರ ಸಬಲೀಕರಣಕ್ಕಾಗಿ ಅಂದಿನ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಹಾಗೂ ಡಾ.ಪ್ರಣಬ್ ಮುಖರ್ಜಿಯವರು ವಿವೇಕ್ ಜೋಶಿಯವರನ್ನು ಗೌರವಿಸಿದ್ದರು. ಅವರನ್ನು ಬೆಳೆಸಿದ ಕಾರಣಕ್ಕಾಗಿ ವಿವೇಕ್ ಜೋಶಿಯ ತಾಯಿ ಕೋಶಲಿಯಾ ದೇವಿ ಅವರನ್ನು, ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅಭಿನಂದಿಸಿದ್ದಾರೆ.
ಮುಂಬೈ ವಿಮಾನ ನಿಲ್ದಾಣದಲ್ಲಿ ನಡೆದ ಒಂದು ಘಟನೆಯು, ವಿವೇಕ್ ಅವರ ಜೀವನ ಬದಲಿಸಿತು. ಅವರಂತಹ ಅನೇಕ ವಿಶೇಷ ಚೇತನರ ಹಕ್ಕುಗಳಿಗಾಗಿ ಹೋರಾಡಲು ಶಕ್ತಿ ನೀಡಿತು.