ನಲ್ಗೊಂಡ: ಆತನೊಬ್ಬ ರಾಕ್ಷಸನಂತೆ ವರ್ತಿಸಿ, ಏನು ಅರಿಯದ ತನ್ನ ನಾಲ್ಕು ವರ್ಷದ ಮಗುವನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ತಿರ್ಮಲರಾಯನಿಗೂಢ ಗ್ರಾಮದಲ್ಲಿ ನಡೆದಿದೆ.
ಸೂರ್ಯಪೇಟ ಜಿಲ್ಲೆಯ ಜೂಜಿರೆಡ್ಡಿಗೂಡ ನಿವಾಸಿ ಚಿಂತಲ ಕನಕಯ್ಯ, ಸ್ವಪ್ನಾ ದಂಪತಿಗೆ ಅಕ್ಷತಾ (6) ಮತ್ತು ಅಕ್ಷಯ (4) ಮಕ್ಕಳಿದ್ದರು. ಜೀವನಕ್ಕಾಗಿ ಮಕ್ಕಳೊಂದಿಗೆ ಹೈದರಾಬಾದ್ನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ತಿಂಗಳ ಹಿಂದೆ ಪತಿ - ಪತ್ನಿ ಮಧ್ಯೆ ಜಗಳವಾಗಿದ್ದು, ಕನಕಯ್ಯ ಮಕ್ಕಳಿಬ್ಬರನ್ನು ತನ್ನೊಂದಿಗೆ ತಿರ್ಮಲರಾಯನಿಗೂಡಕ್ಕೆ ಹೋಗಿದ್ದಾನೆ.
ಕನಕಯ್ಯ ತನ್ನ ದೊಡ್ಡಪ್ಪನ ಮನೆಯಲ್ಲಿ ತಂಗಿದ್ದು, ಕೂಲಿ - ನಾಲಿ ಮಾಡಿಕೊಂಡು ಮಕ್ಕಳೊಂದಿಗೆ ಸುಖವಾಗಿ ಜೀವನ ಸಾಗಿಸುತ್ತಿದ್ದನು. ಮಗ ಅಕ್ಷಯನನ್ನು ನೋಡಿಕೊಳ್ಳಲು ಕಷ್ಟವಾಗುತ್ತಿದ್ದು, ಅವನ್ನು ಬಂದು ಕರೆದುಕೊಂಡು ಹೋಗುವಂತೆ ಕನಕಯ್ಯ ಕುಟುಂಬಸ್ಥರು ಸ್ವಪ್ನಾಗೆ ಹೇಳಿದ್ದಾರೆ. ಇನ್ನು ತಾಯಿ ಸ್ವಪ್ನಾ ಮೂರ್ನಾಲ್ಕು ದಿನಗಳಲ್ಲಿ ಕರೆದುಕೊಂಡು ಹೋಗುತ್ತೇನೆಂದು ಹೇಳಿದ್ದಾರೆ. ಈ ವಿಷಯ ಕನಕಯ್ಯನಿಗೆ ಗೊತ್ತಾಗಿದ್ದು, ಕುಟುಂಬಸ್ಥರೊಂದಿಗೆ ಜಗಳವಾಡಿದ್ದಾನೆ.
ಇನ್ನು ಗುರುವಾರ ಬೋನಾಲ ಹಬ್ಬ ಇರುವುದರಿಂದ ಕನಕಯ್ಯ ಕುಡಿದು ಬಂದು ಮನೆಯಲ್ಲಿ ಮಗನೊಂದಿಗೆ ಮಲಗಿದ್ದಾನೆ. ಬಳಿಕ ಮಧ್ಯೆರಾತ್ರಿ ಎಚ್ಚರಗೊಂಡ ಕನಕಯ್ಯ ಮಗನ ಕತ್ತು ಹಿಸುಕಿ ಮೈ ತುಂಬಾ ಬಾಯಿಂದ ಕಚ್ಚಿ, ಪಿನ್ನಿಂದ್ ಮಗುವಿನ ದೇಹವನ್ನು ಚುಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾನೆ.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತಾಯಿಗೆ ಮಗು ಸಿಗಬಾರದೆಂಬ ಕೋಪದಿಂದ ಕನಕಯ್ಯ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.