ರಾಜ್ಕೋಟ್ :ಮಗಳ ಮದುವೆಗೆ ತಂದೆಯೊಬ್ಬ ಒಂದು ಎತ್ತಿನಗಾಡಿಯಲ್ಲಿ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದ ಅಪರೂಪದ ಪ್ರಸಂಗ ಗುಜರಾತ್ನ ರಾಜಕೋಟ್ನಲ್ಲಿ ನಡೆದಿದೆ. ಮಗಳು ತನ್ನ ಮದುವೆಗೆ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಲು ಹೇಳಿದ್ದರಿಂದ ಸುಮಾರು 2400 ಪುಸ್ತಕಗಳನ್ನು ಮದುವೆಯ ದಿನ ಉಡುಗೊರೆಯಾಗಿ ನೀಡಿದ್ದಾನೆ.
ತಂದೆಯಿಂದ ಮಗಳ ಮದುವೆಗೆ ಎತ್ತಿನಗಾಡಿಯ ತುಂಬಾ ಪುಸ್ತಕಗಳ ಉಡುಗೊರೆ ರಾಜ್ಕೋಟ್ ನಿವಾಸಿ ಹರ್ದೇವ್ ಸಿಂಗ್ ಜಡೇಜಾ ಎಂಬುವರು ತಮ್ಮ ಪುತ್ರಿ ಕಿನ್ನರಿಬಾ ಎಂಬಾಕೆಯ ಮದುವೆಗೆ ಪುಸ್ತಕಗಳನ್ನು ಗಿಫ್ಟ್ ಆಗಿ ಕೇಳಿದ್ದಳು. ಇದಕ್ಕಾಗಿ ತಂದೆ ದೇಶಾದ್ಯಂತ ಸಂಚರಿಸಿ ಪುಸ್ತಕಗಳನ್ನು ಖರೀದಿಸಿದ್ದಾರೆ. ಮದುವೆಯ ದಿನದಂದು ಉಡುಗೊರೆಯಾಗಿ ನೀಡಿದ್ದಾರೆ.
ಹರ್ದೇವ್ ಸಿಂಗ್ ಜಡೇಜಾ ವೃತ್ತಿಯಿಂದ ಶಿಕ್ಷಕ. 'ನನ್ನ ಮಗಳು ತುಂಬಾ ಚಿಕ್ಕವಯಸ್ಸಿನಿಂದಲೇ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಿದ್ದಳು. ಮದುವೆಗೆ ಪುಸ್ತಕಗಳನ್ನ ಉಡುಗೊರೆಯಾಗಿ ನೀಡಬೇಕೆಂದು ಕೇಳಿದಾಗ, ಅವುಗಳನ್ನ ಕೊಡಿಸಿದ್ದೇನೆ ಎಂದಿದ್ದಾರೆ. ಚಿಕ್ಕ ವಯಸ್ಸಿನಿಂದ ಮಗಳಿಗೆ ಪುಸ್ತಕಗಳನ್ನು ನೀಡಿದ್ದು ಮನೆಯಲ್ಲಿ ಒಂದು ಪ್ರತ್ಯೇಕ ಗ್ರಂಥಾಲಯ ನಿರ್ಮಾಣ ಮಾಡಿದ್ದಾಳೆ' ಎಂದು ಮದುವೆ ವೇಳೆ ಸಂತಸ ವ್ಯಕ್ತಪಡಿಸಿದ್ದಾರೆ ಹರದೇವ್. ಭಾರತದ ಇತಿಹಾಸ, ಮಹಾಭಾರತ, ವಿಷ್ಣುಪುರಾಣದ ಜತೆಗೆ ಗುಜರಾತಿ ಹಾಗೂ ಇಂಗ್ಲೀಷ್ನ ಪುಸ್ತಕಗಳನ್ನು ತನ್ನ ಮಗಳಿಗೆ ಉಡುಗೊರೆಯಾಗಿ ನೀಡಿದ್ದಾನೆ ತಂದೆ.
ಮದುವೆಯ ವೇಳೆ ಹಣ, ಚಿನ್ನ, ಕಾರು, ಬಂಗಲೆ ಉಡುಗೊರೆಯಾಗಿ ಕೇಳುವ ಹಾಗೂ ಉಡುಗೊರೆಯಾಗಿ ನೀಡುವ ರೂಢಿ ಇದೆ. ಈ ಹಿನ್ನೆಲೆಯಲ್ಲಿ ರಾಜಕೋಟ್ನಲ್ಲಿ ನಡೆದ ಅಪರೂಪದ ವಿವಾಹ ಎಲ್ಲರ ಗಮನ ಸೆಳೆಯುತ್ತಿದೆ.