ರಂಗಾರೆಡ್ಡಿ(ತೆಲಂಗಾಣ):ಜೆಸಿಬಿ ಮತ್ತು ಬೈಕ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ, ತಂದೆ-ತಾಯಿ ಮತ್ತು ಮಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.
ಇಡೀ ಕುಟುಂಬವನ್ನೇ ಬಲಿ ಪಡೆದ ಜೆಸಿಬಿ... ಅಪ್ಪ- ಅಮ್ಮನ ಜೊತೆ ಮಗಳು ಸಾವು - ಅಪಘಾತದಲ್ಲಿ ಕುಟುಂಬ ಸಾವು
ತಂದೆ, ತಾಯಿ ಮತ್ತು ಮಗಳನ್ನು ಯಮಸ್ವರೂಪಿ ಜೆಸಿಬಿವೊಂದು ಬಲಿ ಪಡೆದಿದೆ. ಬೈಕ್ನಲ್ಲಿ ತೆರಳುತ್ತಿದ್ದ ಈ ಕುಟುಂಬಸ್ಥರು ರಸ್ತೆ ಅಪಘಾತ ಸಂಭವಿಸಿ ಸ್ಥಳದಲ್ಲೇ ಮೃತಪಟ್ಟಿರುವ ದುರಂತ ತೆಲಂಗಾಣದಲ್ಲಿ ನಡೆದಿದೆ.

ಕುಟುಂಬವೇ ಬಲಿ ಪಡೆದ ಜೆಸಿಬಿ
ಸುಭಾನ್ಪೂರ್ ಗ್ರಾಮದ ನಿವಾಸಿ ಪೋಚಾರಂ ಬಾಲ್ರೆಡ್ಡಿ, ಆತನ ಪತ್ನಿ ಜ್ಯೋತಿ ಮತ್ತು ಮಗಳು ಬೈಕ್ನಲ್ಲಿ ತೆರಳುತ್ತಿದ್ದರು. ಈ ವೇಳೆ ಎದರಿನಿಂದ ಬಂದ ಜೆಸಿಬಿ ಮತ್ತು ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿದೆ. ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸುದ್ದಿ ತಿಳಿದ ಕುಟುಂಬಸ್ಥರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.