ಮೆಕ್ಸಿಕೊ:ಮಾನಸಿಕ ಸಮಸ್ಯೆಗಳ ನಿವಾರಣೆ, ಆರೋಗ್ಯ ನಿವಾರಣೆ ಸೇರಿದಂತೆ ವಿವಿಧ ರೋಗಗಳಿಗೆ ರಾಮಬಾಣ ಯೋಗ. ಆದರೆ ಇಲ್ಲೊಬ್ಬಳು ಯುವತಿ ಕಠಿಣ ಯೋಗಾಸನ ಮಾಡಲು ಹೋಗಿ 80 ಅಡಿ ಎತ್ತರದ ಬಿಲ್ಡಿಂಗ್ ಮೇಲಿಂದ ಬಿದ್ದು ಆಸ್ಪತ್ರೆ ಸೇರಿದ್ದಾಳೆ.
ಕಠಿಣ ಯೋಗಾಸನ ಪ್ರಯತ್ನಿಸಲು ಹೋಗಿ 80 ಅಡಿ ಬಿಲ್ಡಿಂಗ್ ಮೇಲಿಂದ ಬಿದ್ದ ವಿದ್ಯಾರ್ಥಿನಿ! - ಮೆಕ್ಸಿಕೊ ಸುದ್ದಿ
ಬಿಲ್ಡಿಂಗ್ನ ಆರನೇ ಮಹಡಿಯ ಬಾಲ್ಕನಿಯಲ್ಲಿ ನಿಂತು ಯೋಗ ಮಾಡುತ್ತಿದ್ದ ಕಾಲೇಜು ವಿದ್ಯಾರ್ಥಿನಿ ಕಳೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ.
ಮೆಕ್ಸಿಕೊದಲ್ಲಿ ಕಾಲೇಜು ವಿದ್ಯಾರ್ಥಿನಿಯಾಗಿರುವ ಅಲೆಕ್ಸ್ ಬಿಲ್ಡಿಂಗ್ವೊಂದರ ಆರನೇ ಮಹಡಿಯ ಬಾಲ್ಕನಿಯಲ್ಲಿ ಯೋಗಾಸನ ಮಾಡುತ್ತಿದ್ದಳು. ಈ ವೇಳೆ ಏಕಾಏಕಿಯಾಗಿ ಆಯಾತಪ್ಪಿ 23 ವರ್ಷದ ಯುವತಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾಳೆ. ಇನ್ನು ಅಲೆಕ್ಸ್ ಮಾಡುತ್ತಿದ್ದ ಯೋಗಾಸನದ ವಿಡಿಯೋವನ್ನ ಆಕೆಯ ಬಾಯ್ಫ್ರೆಂಡ್ ಮೊಬೈಲ್ನಲ್ಲಿ ಸೆರೆ ಹಿಡಿಯುತ್ತಿದ್ದನು.
ಆಯತಪ್ಪಿ ಕೆಳಗೆ ಬಿಳುತ್ತಿದ್ದಂತೆ ತಕ್ಷಣವೇ ಆಕೆಯನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಬರೋಬ್ಬರಿ 11ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಇನ್ನು ಮುಂದಿನ ಮೂರು ವರ್ಷಗಳ ಕಾಲ ಆಕೆ ನಡೆಯಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಆಕೆಯ ದೇಹದಲ್ಲಿನ 110 ಮೂಳೆಗಳು ಮುರಿದಿದ್ದು,ಕೈ, ಕಾಲು ಹಾಗೂ ತಲೆಗೆ ಗಂಭೀರವಾಗಿ ಗಾಯವಾಗಿದೆ.