ವಯನಾಡು(ಕೇರಳ):ಕೇರಳದ ವಯನಾಡು ಕ್ಷೇತ್ರದ ಸಂಸದ ರಾಹುಲ್ ಗಾಂಧಿ ಇಂಗ್ಲಿಷ್ನಲ್ಲಿ ಮಾಡಿರುವ ಭಾಷಣವನ್ನು 12ನೇ ತರಗತಿ ಬಾಲಕಿ ಮಲಯಾಳಂ ಭಾಷೆಗೆ ಅನುವಾದಿಸಿ ಮೆಚ್ಚುಗೆ ಗಳಿಸಿದ್ದಾಳೆ.
ಕೇರಳದ ವಯನಾಡಿನ ಶಾಲೆಯಲ್ಲಿ ವಿಜ್ಞಾನ ಲ್ಯಾಬ್ ಉದ್ಘಾಟನೆಗೆ ತೆರಳಿದ್ದ ವೇಳೆ ರಾಹುಲ್ ಗಾಂಧಿ ವಿದ್ಯಾರ್ಥಿಗಳ ಬಳಿ, ನನ್ನ ಭಾಷಣವನ್ನು ಇಲ್ಲಿ ಯಾರಾದ್ರೂ ಇಂಗ್ಲಿಷ್ನಿಂದ ಮಲಯಾಳಂಗೆ ಅನುವಾದ ಮಾಡುತ್ತೀರಾ? ಎಂದು ಕೇಳಿದ್ದಾರೆ. ಈ ವೇಳೆ 12ನೇ ತರಗತಿ ವಿದ್ಯಾರ್ಥಿನಿ ಸಫಾ ಸೆಬಿನಾ ವೇದಿಕೆಗೆ ಬಂದು ಸಂಪೂರ್ಣ ಭಾಷಣವನ್ನ ಅನುವಾದ ಮಾಡಿದ್ದಾರೆ.