ಕರ್ನಾಟಕ

karnataka

ETV Bharat / bharat

ಬಾಯ್ ​ಫ್ರೆಂಡ್​ ಪಕ್ಕದ ಸೀಟ್​ ನೀಡದ ಗಗನಸಖಿ... ರೊಚ್ಚಿಗೆದ್ದ ಯುವತಿ ಮಾಡಿದ್ದು ಹೀಗೆ!

ವಿಮಾನದಲ್ಲಿ ಪ್ರತಿ ಪ್ರಯಾಣಿಕರನ್ನು ನಗುತ್ತಲೇ ಮಾತನಾಡಿಸುವುದು, ಪ್ರತಿ ಸೀಟ್​ಗೆ ಹೋಗಿ ಪ್ರಯಾಣಿಕರನ್ನು ವಿಚಾರಿಸುವುದು ಗಗನಸಖಿಯರು. ಏರ್ ಹೊಸ್ಟೆಸ್ ಕೆಲಸ ಅಷ್ಟು ಸುಲಭದ ಮಾತಲ್ಲ. ಇಷ್ಟೆಲ್ಲ ಮಾಡಿದ ಅವರ ಮೇಲೆ ಕೆಲವೊಮ್ಮೆ ಪ್ರಯಾಣಿಕರು ಕರುಣೆ ಇಲ್ಲದೆ ವರ್ತಿಸುತ್ತಾರೆ. ಅಂಥದೊಂದು ಘಟನೆ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

ಕೃಪೆ: Twitter

By

Published : Aug 17, 2019, 1:28 PM IST

ಏರ್​ ಏಷ್ಯಾ ವಿಮಾನದಲ್ಲಿ ತನ್ನ ಗೆಳತಿಗೆ ಮತ್ತು ಸಹೋದ್ಯಗಿ ಆದ ಕೆಟ್ಟ ಅನುಭವವನ್ನು ಗಗನಸಖಿ ನುರಲಿಯಾ ಮಜ್ಲಾನ್ ಟ್ವೀಟ್​ ಮೂಲಕ ಬಿಚ್ಚಿಟ್ಟಿದ್ದಾರೆ. ಬಾಯಫ್ರೆಂಡ್​ ಪಕ್ಕದ ಸೀಟ್​ ಅರೆಂಜ್​ ಮಾಡದ ಗಗನಸಖಿ ವಿರುದ್ಧ ಯುವತಿಯೊಬ್ಬಳು ಕೆಟ್ಟದಾಗಿ ನಡೆದುಕೊಂಡಿರುವ ಬಗ್ಗೆ ನುರಲಿಯಾ ಮಾಹಿತಿ ಹೊರ ಹಾಕಿದ್ದಾರೆ.

ಚೈನೀಸ್​ ಜೋಡಿಯೊಂದು ಏರ್​ಏಷ್ಯಾ ವಿಮಾನದಲ್ಲಿ ಟಿಕೆಟ್​ ಬುಕ್​ ಮಾಡಿದ್ದರು. ಆದ್ರೆ, ಇವರ ಸೀಟ್​ ಅಕ್ಕ-ಪಕ್ಕ ಬರದೇ ಬೇರೆ-ಬೇರೆಯಾಗಿ ಬಂದಿದೆ. ವಿಮಾನದಲ್ಲಿ ಪ್ರಯಾಣ ಬೆಳಸಿದ ವೇಳೆ ಯುವತಿ ನನ್ನ ಬಾಯಫ್ರೆಂಡ್​ ಪಕ್ಕ ಸೀಟ್​ ಅರೇಂಜ್​ ಮಾಡಿಕೊಡುವಂತೆ ಗಗನಸಖಿಗೆ ಮನವಿ ಮಾಡಿದ್ದರು. ಆದರೆ, ವಿಮಾನ ಫುಲ್​ ಆಗಿದ್ದು, ಸಹ ಪ್ರಯಾಣಿಕರು ಸೀಟ್​ ಬಿಟ್ಟು​ ಕೋಡಲು ನಿರಾಕರಿಸಿದ್ದರು. ಇದರಿಂದ ಆ ಯುವತಿಗೆ ಗಗನಸಖಿ ಸೀಟ್​ ಒದಗಿಸಿಕೊಡಲು ಸಾಧ್ಯವಾಗ್ತಿಲ್ಲ ಅಂತಾ ಹೇಳಿದ್ದಾರೆ.

ಸೀಟ್​ ಅರೇಂಜ್​ ಮಾಡಿ ಕೊಡದ ಗಗನಸಖಿ ವಿರುದ್ಧ ಯುವತಿ ರೊಚ್ಚಿಗೆದ್ದು ಹೈಡ್ರಾಮ ನಡೆಸಿದ್ದಾಳೆ. ತನ್ನ ಬಳಿಯಿದ್ದ ಬಿಸಿ - ಬಿಸಿಯಾದ ನೂಡಲ್ಸ್​ ನೀರನ್ನು ಗಗನಸಖಿ ಮುಖಕ್ಕೆ ಎರಚಿ ದುರ್ವತನೆ ತೋರಿದ್ದಾಳೆ. ಬಳಿಕ ಯುವತಿಯ ಬಾಯ್​ಫ್ರೆಂಡ್​ ವಿಮಾನವನ್ನು ಬ್ಲಾಸ್ಟ್​ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಅವರಿಬ್ಬರನ್ನು ಸಮಾಧಾನ ಪಡಿಸಿದ ಸಿಬ್ಬಂದಿ ವಿಮಾನ ನಿಲ್ದಾಣಕ್ಕೆ ತೆರಳಿ ದೂರು ನೀಡಿದ್ದಾರೆ. ಈ ಘಟನೆ ಬಗ್ಗೆ ವಿಚಾರಣೆ ನಡೆಸಿದ ವಿಮಾನ ಸಂಸ್ಥೆ ಅವರನ್ನು ಇನ್ಮುಂದೆ ಏರ್ ​ಏಷ್ಯಾ ವಿಮಾನದಲ್ಲಿ ಪ್ರಯಾಣಿಸದಂತೆ ಬಹಿಷ್ಕರಿಸಿದೆ.

ABOUT THE AUTHOR

...view details