ಅಂಬಿಕಾಪುರ: ಪ್ರತಿ ನಗರಗಳಿಗೂ ಸ್ವಚ್ಛತೆಯಲ್ಲಿ ನಮ್ಮ ನಗರ ಮುಂದಿರಬೇಕು ಎಂಬ ಆಸೆ ಇರುತ್ತೆ. ಸ್ವಚ್ಛತಾ ಆಂದೋಲನ ನಡೆಸ್ತಾನೆ ಇರುತ್ತವೆ. ಅದಕ್ಕಾಗಿ ವಿಶೇಷ ರೀತಿಯ ಜಾಗೃತಿ ಕಾರ್ಯಕ್ರಮಗಳನ್ನೂ ಕೈಗೊಳ್ಳುವುದು ಸಹಜ.
ಆದರೆ, ಛತ್ತೀಗಢ್ ರಾಜ್ಯದ ಅಂಬಿಕಾಪುರ ಮಹಾನಗರ ಪಾಲಿಕೆ ವಿಭಿನ್ನ ರೀತಿಯಲ್ಲಿ ಸ್ವಚ್ಛತಾ ಆಂದೋಲನ ನಡೆಸ್ತಿದೆ. ಇದೇ ಮೊದಲ ಬಾರಿಗೆ 'ಗಾರ್ಬೇಜ್ ಕೆಫೆ' ಎಂಬ ಯೋಜನೆ ರೂಪಿಸಿ, ಇದರ ಮೂಲಕ ಒಂದು ಕೆಜಿ ಪ್ಲಾಸ್ಟಿಕ್ಗೆ ಒಂದು ಹೊತ್ತಿನ ಫುಲ್ ಮೀಲ್ಸ್ ಮತ್ತು ಅರ್ಧ ಕೆಜಿ ಪ್ಲಾಸ್ಟಿಕ್ಗೆ ಬೆಳಗಿನ ಉಪಹಾರವನ್ನು ನೀಡುತ್ತಿದೆ. ಚಿಂದಿ ಆರಿಸುವ ಕಡು ಬಡವರು ಮತ್ತು ಮನೆ ಇಲ್ಲದ ನಿರ್ಗತಿಕರಿಗೆ ಸಹಾಯ ಮಾಡಲು ಮತ್ತು ನಗರವನ್ನು ಪ್ಲಾಸ್ಟಿಕ್ ಮುಕ್ತವಾಗಿರಿಸಲು ಪಾಲಿಕೆ ಇಂತಹ ಒಂದು ವಿಭಿನ್ನ ಯೋಜನೆಯನ್ನ ಜಾರಿಗೆ ತಂದಿದೆ. ಸಹಜವಾಗಿಯೇ ಇದರಿಂದಾಗಿ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಮಾಡುವ ಗುರಿಯನ್ನೂ ಪಾಲಿಕೆ ಹೊಂದಿದೆ.
ಅಂಬಿಕಾಪುರ ಮಹಾನಗರ ಪಾಲಿಕೆಯ ಮೇಯರ್ ಅಜಯ್ ಟಿರ್ಕಿ.. ಈ ಕುರಿತು ಮಾತನಾಡಿರುವ ಅಂಬಿಕಾಪುರ ಮಹಾನಗರ ಪಾಲಿಕೆಯ ಮೇಯರ್ ಅಜಯ್ ಟಿರ್ಕಿ, ಅಂಬಿಕಾಪುರದಲ್ಲಿ ಘನತ್ಯಾಜ್ಯ ನಿರ್ವಹಣೆ ಯಶಸ್ವಿಯಾಗಿ ನಡೆಯುತ್ತಿದೆ. ಮನೆ-ಮನೆಗೆ ಹೋಗಿ ತ್ಯಾಜ್ಯ ಸಂಗ್ರಹಿಸುವ ಪ್ರಕ್ರಿಯೆ ಈಗಾಗಲೇ ಚಾಲ್ತಿಯಲ್ಲಿದೆ. ಅದರಿಂದ ಸಿಗುವ ಪ್ಲಾಸ್ಟಿಕ್ಗಳನ್ನು ಮರು ಬಳಕೆ ಮಾಡುತ್ತೇವೆ. ಅದೇ ರೀತಿ 'ಗಾರ್ಬೇಜ್ ಕೆಫೆ' ಯೋಜನೆಯಿಂದ ಹಲವಾರು ಬಡವರಿಗೆ ಸಹಾಯವಾಗಲಿದ್ದು, ಪಾಲಿಕೆಯ ಬಜೆಟ್ನಲ್ಲಿ 'ಗಾರ್ಬೇಜ್ ಕೆಫೆ'ಗೆಂದೇ 6 ಲಕ್ಷ ರೂ.ಗಳನ್ನು ಮೀಸಲಿಟ್ಟಿದ್ದೇವೆ ಎಂದು ಹೇಳಿದರು.
ಆದರೆ, ಮಹಾನಗರ ಪಾಲಿಕೆಯ ಪ್ರತಿಪಕ್ಷ ಬಿಜೆಪಿ ಮತ್ತು ಇತರೆ ಪಕ್ಷಗಳು ಅಂಬಿಕಾಪುರವು ಈಗಾಗಲೇ ಸ್ವಚ್ಛವಾಗಿದೆ ಮತ್ತು ಚಿಂದಿ ಆರಿಸುವವರಿಗೆ ಪ್ಲಾಸ್ಟಿಕ್ ಸಿಗುವುದೇ ಕಷ್ಟ ಎಂದು ಟೀಕಿಸುತ್ತಿದ್ದಾರೆ.ಸ್ವಚ್ಛತೆಯಲ್ಲಿಈ ಪಾಲಿಕೆ ದೇಶದಲ್ಲೇ 2ನೇ ಸ್ಥಾನ ಪಡೆದಿದೆ. 'ಗಾರ್ಬೇಜ್ ಕೆಫೆ' ಯೋಜನೆಯಂತೆ ಈಗಾಗಲೇ ಡಾ.ರಾಮನ್ ಸಿಂಗ್ ಯೋಜನೆ ಮೂಲಕ ಒಂದು ಕೆಜಿ ಪ್ಲಾಸ್ಟಿಕ್ಗೆ 20 ರೂಪಾಯಿ ನೀಡುವ ಮತ್ತು 1 ರೂಪಾಯಿಗೆ ಒಂದು ಕೆಜಿ ಧಾನ್ಯ ನೀಡಲಾಗುತ್ತದೆ. ಆದ್ದರಿಂದ ಈ 'ಗಾರ್ಬೇಜ್ ಕೆಫೆ' ಯೋಜನೆಯು ಶೀಘ್ರದಲ್ಲಿಯೆ ವಿಫಲವಾಗುತ್ತದೆ ಎಂದು ಪಾಲಿಕೆಯ ಪ್ರತಿಪಕ್ಷ ನಾಯಕ ಜನ್ಮಜಯ್ ಮಿಶ್ರಾ ಹೇಳಿದ್ದಾರೆ.
ಕೇಂದ್ರ ಸರ್ಕಾರದ ಸ್ವಚ್ಛ ಸರ್ವೇಕ್ಷನ್ 2019ರ ಅಡಿ ಮಧ್ಯಪ್ರದೇಶದ ಇಂದೋರ್ ನಂತರಅಂಬಿಕಾಪುರ ನಗರ 2ನೇ'ಭಾರತದ ಸ್ವಚ್ಛ ನಗರ' ಎಂದು ಘೋಷಿಸಲಾಗಿದೆ ಮತ್ತು 'ಕಸ ಮುಕ್ತ ನಗರ' ಸ್ಟಾರ್ ರೇಟಿಂಗ್ನಲ್ಲೂ ಫೈವ್ ಸ್ಟಾರ್ ರೇಟಿಂಗ್ ನೀಡ್ಲಾಗಿದೆ.