ಹೈದರಾಬಾದ್: ಸಂಬಂಧದಲ್ಲಿ ಆಕೆ ಸಹೋದರಿ. ಆದ್ರೂ ಸಹ ಆಕೆಯನ್ನು ನನಗೆ ಮದುವೆ ಮಾಡಿಕೊಡಿ ಎಂದು ಅಣ್ಣನೊಬ್ಬ ದೊಡ್ಡಮ್ಮಳಿಗೆ ಚಾಕುವಿಂದ ಇರಿದ ಘಟನೆ ತೆಲಂಗಾಣದಲ್ಲಿ ಸಂಚಲನ ಮೂಡಿಸಿದೆ.
ಹೌದು, ಇಂತಹದೊಂದು ವಿಚಿತ್ರ ಪ್ರಕರಣ ನಡೆದಿರುವುದು ಹೈದರಾಬಾದ್ನಲ್ಲಿ. ಇಲ್ಲಿನ ಶಂಷಾಬಾದ್ನ ನಿವಾಸಿ ರಮೇಶ್ಗೆ (26) ತನ್ನ ದೊಡ್ಡಪ್ಪನ ಮಗಳ ಮೇಲೆ ಪ್ರೇಮಾಂಕುರವಾಗಿದೆ. ಅಷ್ಟೆ ಅಲ್ಲದೇ ಸಂಬಂಧದಲ್ಲಿ ಸಹೋದರಿ ಆದ್ರೂ ಅವಳನ್ನು ನಾನು ಪ್ರೀತಿಸುತ್ತಿದ್ದೇನೆ, ನನಗೆ ಕೊಟ್ಟು ಮದುವೆ ಮಾಡಿಕೊಡಿ ಎಂದು ನಾಚಿಕೆ ಇಲ್ಲದೇ ದೊಡ್ಡಪ್ಪನಿಗೆ ಕೇಳಿದ್ದಾನೆ.