ಕರ್ನಾಟಕ

karnataka

ETV Bharat / bharat

ಹನಿ ಟ್ರ್ಯಾಪ್​ಗೆ ಸಿಲುಕಿ ಈತ ಕಳೆದುಕೊಂಡಿದ್ದು ಬರೋಬ್ಬರಿ ಇಷ್ಟು ಕೋಟಿ!? - rajastan big honey trap case

ರಾಜಸ್ಥಾನದಲ್ಲಿ ಬಹುದೊಡ್ಡ ಹನಿ ಟ್ರ್ಯಾಪ್​ ಪ್ರಕರಣವೊಂದು ಬಯಲಿಗೆ ಬಂದಿದ್ದು, ಪ್ರೇಮಿಗಳಿಬ್ಬರ ಬೆದರಿಕೆಯಿಂದಾಗಿ ನೊಂದ ವ್ಯಕ್ತಿ ಬರೋಬ್ಬರಿ ಒಂದೂವರೆ ಕೋಟಿ ಕಳೆದುಕೊಂಡಿದ್ದಾನೆ.

rajastan big honey trap case
ರಾಜಸ್ಥಾನದ ಬಹುದೊಡ್ಡ ಹನಿ ಟ್ರ್ಯಾಪ್​ ಕೇಸ್​ ಬಯಲು

By

Published : Feb 3, 2020, 2:15 PM IST

ದೌಸಾ(ರಾಜಸ್ಥಾನ): ಬಂಟಿ ಹಾಗೂ ಬಬ್ಲಿ ಎಂಬ ಹೆಸರಿನಲ್ಲಿ ಪ್ರೇಮಿಗಳಿಬ್ಬರು ನಡೆಸಿರುವ ದೊಡ್ಡ ಹನಿ ಟ್ರ್ಯಾಪ್​ ಪ್ರಕರಣವೊಂದು ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ದೌಸಾ ಜಿಲ್ಲೆಯ ನಿವಾಸಿಗಳಾದ ಯುವತಿ ಕಿರಣ್​ ಬೈರವ ಹಾಗೂ ಯುವಕ ಅಕ್ಷಯ್​ ಅಲಿಯಾಸ್​ ಆಶು ಮೀನಾ ಪ್ರಕರಣದ ಆರೋಪಿಗಳಾಗಿದ್ದು, ಇದೀಗ ಇವರು ಪೊಲೀಸರ ಅತಿಥಿಗಳಾಗಿದ್ದಾರೆ.

ರಾಜಸ್ಥಾನದ ಬಹುದೊಡ್ಡ ಹನಿ ಟ್ರ್ಯಾಪ್​ ಕೇಸ್​ ಬಯಲು

ಪ್ರಕರಣ ಹಿನ್ನೆಲೆ:2016 ರಲ್ಲಿ ಯುವತಿ ಕಿರಣ್​, ದೌಸಾ ಜಿಲ್ಲೆಯ ರಾಮನಗರ ಕಾಲೋನಿ ನಿವಾಸಿಯಾದ ವಿಶ್ರಮ್​ ಬೈರವ ಎಂಬ ವ್ಯಕ್ತಿಯನ್ನು ಫೋನ್​ನಲ್ಲಿ ಪರಿಚಯ ಮಾಡಿಕೊಂಡಿದ್ದರು. ತನಗೆ ಮದುವೆಯಾಗಿ ವಿಚ್ಛೇದನ ಪಡೆದಿರುವುದಾಗಿ ಹೇಳಿಕೊಂಡ ಯುವತಿ ಆತನೊಂದಿಗೆ ಸ್ನೇಹ ಸಂಪಾದಿಸಿದ್ದಳು. ನಿಧಾನವಾಗಿ ತನ್ನ ಪ್ರೇಮಜಾಲದಲ್ಲಿ ಬೀಳಿಸಿಕೊಂಡ ಕಿರಣ್​ 2017ರಲ್ಲಿ ಕೋಣೆಯೊಂದಕ್ಕೆ ಕರೆದು ವಿಶ್ರಮ್ ಜೊತೆ ದೈಹಿಕ ಸಂಪರ್ಕ ಬೆಳೆಸುತ್ತಾಳೆ. ಆ ಬಳಿಕ ಹಣಕ್ಕೆ ಬೇಡಿಕೆಯಿಟ್ಟಿದ್ದು, ಹಣ ನೀಡಲು ನಿರಾಕರಿಸಿದಕ್ಕೆ ಅತ್ಯಾಚಾರದ ಆರೋಪ ಹೊರಿಸುವುದಾಗಿ ಬೆದರಿಸಿದ್ದಾಳೆ. ಹೀಗೆ ಆಶು ಮೀನಾ ಜೊತೆ ಸೇರಿಕೊಂಡು ಬೆದರಿಸುತ್ತಾ ವಿಶ್ರಮ್ ಬಳಿ ಬರೋಬ್ಬರಿ ಒಂದೂವರೆ ಕೋಟಿ ಹಣ ವಸೂಲಿ ಮಾಡಿದ್ದಾಳೆ.

ಇದರಿಂದ ಬೇಸತ್ತ ವಿಶ್ರಮ್, ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಕಳೆದ ಜ.28 ರಂದು ದೂರು ನೀಡಿದ್ದು, ತನಿಖೆ ನಡೆಸಿದ ಪೊಲೀಸರು ಇನ್ನೇನು ಮದುವೆಯಾಗಲು ತಯಾರಾಗಿದ್ದ ಕಿರಣ್​ ಹಾಗೂ ಆಶು ಇಬ್ಬರನ್ನೂ ಬಂಧಿಸಿದ್ದಾರೆ.

ABOUT THE AUTHOR

...view details