ನಗೌರ್:ರಾಜಸ್ಥಾನದ ನಗೌರ್ನಲ್ಲಿ ಜನಿಸಿದ ಗಂಡು ಮಗುವೊಂದು ಅಪರೂಪದ ಕಾಯಿಲೆಯಿಂದ ಬಳಲುತ್ತಿದೆ. ಮಗುವಿನ ಬೆರಳುಗಳು ಒಂದಕ್ಕೊಂದು ಅಂಟಿಕೊಂಡಿದ್ದು,ದೇಹದ ಚರ್ಮ ವಿಚಿತ್ರ ಹಾಗೂ ಗಡುಸಾಗಿದೆ. ಈ ಖಾಯಿಲೆ ಹೇಗಿದೆ ಅಂದ್ರೆ, ಮಗುವಿನ ದೇಹ ಪೂರ್ತಿ ಪ್ಲಾಸ್ಟಿಕ್ ಶೀಟ್ನಿಂದ ಸುತ್ತಿದಂತೆ ಕಾಣುತ್ತಿದೆ.
ಈ ಅಪರೂಪದ ಕಾಯಿಲೆಯ ಲಕ್ಷಣವನ್ನು ತಿಳಿಸಿದ ಆಸ್ಪತ್ರೆಯ ಶಿಶುವೈದ್ಯ ಡಾ. ಮುಲಾರಮ್ ಕಡೇಲಾ, 6 ಲಕ್ಷದಲ್ಲಿ ಒಂದು ಮಗುವಿಗೆ ಈ ಖಾಯಿಲೆ ಇರುತ್ತದೆ. ಈ ಲಕ್ಷಣಗಳಿರುವ ಮಗುವನ್ನು 'ಕಲೋಡಿಯನ್ ಬೇಬಿ' ಕನ್ನಡದಲ್ಲಿ ಇದನ್ನು ಮತ್ಸ್ಯವಾದಿ ಎಂದು ಕರೆಯಲಾಗುತ್ತದೆ. ಮಗುವಿನ ಚರ್ಮವನ್ನು ಪ್ಲಾಸ್ಟಿಕ್‌ನಲ್ಲಿ ಸುತ್ತಿದಂತೆ ಭಾಸವಾಗುತ್ತಿದೆ.