ಇಂದೋರ್:ಮಹಾಮಾರಿ ಕೊರೊನಾ ಆರ್ಭಟಕ್ಕೆ ದೇಶದಲ್ಲಿ ಇಂದು ಮತ್ತೊಬ್ಬ ವೈದ್ಯ ಬಲಿಯಾಗಿದ್ದಾರೆ. ಈ ಮೂಲಕ ಸಾವನ್ನಪ್ಪಿರುವ ವೈದ್ಯರ ಸಂಖ್ಯೆ 2ಕ್ಕೆ ಏರಿಕೆಯಾಗಿದೆ. ಜತೆಗೆ ಕೆಲ ವೈದ್ಯರು ಸೋಂಕಿನಿಂದ ಬಳಲುತ್ತಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಮಧ್ಯಪ್ರದೇಶದ ಇಂದೋರ್ನಲ್ಲೇ ಮತ್ತೊಬ್ಬ 65 ವರ್ಷದ ವೈದ್ಯ ಸಾವನ್ನಪ್ಪಿದ್ದಾಗಿ ಅಲ್ಲಿನ ಹಿರಿಯ ವೈದ್ಯಾಧಿಕಾರಿ ಪ್ರವೀಣ್ ಜಾಡಿಯಾ ತಿಳಿಸಿದ್ದಾರೆ.