ಕರ್ನಾಟಕ

karnataka

ETV Bharat / bharat

ಪರೀಕ್ಷೆ ಬರೆಯಲು ತೆರಳಿದ್ದಾಗ ​ ರೂಮ್​ನಲ್ಲಿ ಉಳಿದುಕೊಳ್ಳುವಂತೆ ಮನವಿ... ರಾತ್ರಿ ವೇಳೆ ಅತ್ಯಾಚಾರ! - ಸೋದರ ಸಂಬಂಧಿಯಿಂದ ಅತ್ಯಾಚಾರ

ಪರೀಕ್ಷೆ ಬರೆಯಲು ತೆರಳಿದ್ದ ಯುವತಿ ಮೇಲೆ ಆಕೆಯ ಸೋದರಿ ಸಂಬಂಧಿ ಅತ್ಯಾಚಾರವೆಸಗಿರುವ ಘಟನೆ ನಡೆದಿದ್ದು, ಇದೀಗ ಪ್ರಕರಣ ದಾಖಲಾಗಿದೆ.

ಸಾಂದರ್ಭಿಕ ಚಿತ್ರ

By

Published : Nov 11, 2019, 11:55 AM IST

ಗುರುಗ್ರಾಮ್​​:ಪರೀಕ್ಷೆ ಬರೆಯಲು ತೆರಳಿದ್ದ ಯುವತಿ ಮೇಲೆ ಸೋದರ ಸಂಬಂಧಿ ಅತ್ಯಾಚಾರವೆಸಗಿರುವ ಘಟನೆ ಗುರುಗ್ರಾಮ್​​ನಲ್ಲಿ ನಡೆದಿದ್ದು, ತಡವಾಗಿ ಘಟನೆ ಬೆಳಕಿಗೆ ಬಂದಿದೆ.

24 ವರ್ಷದ ಯುವತಿ ಪರೀಕ್ಷೆ ಬರೆಯಲು ಮಹೇಂದ್ರಗಡನಿಂದ ಗುರುಗ್ರಾಮ್​​ಗೆ ತೆರಳಿದ್ದಳು. ಈ ವೇಳೆ ಪರಿಚಯವಾಗಿರುವ ಆಕೆಯ ಸೋದರ ಸಂಬಂಧಿ ತನ್ನೊಂದಿಗೆ ಹೊಟೇಲ್​​ನಲ್ಲಿ ಉಳಿದುಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾನೆ. ಈ ವೇಳೆ ರಾತ್ರಿ ವೇಳೆ ಆಕೆಯೊಂದಿಗೆ ಅಸಭ್ಯವಾಗಿ ನಡೆದುಕೊಂಡಿರುವ ಜತೆಗೆ ಅತ್ಯಾಚಾರವೆಸಗಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸೆಪ್ಟೆಂಬರ್​ 22ರಂದು ಘಟನೆ ನಡೆದಿದ್ದು, ಇದೀಗ ಮಹಿಳೆ ಮಹೇಂದ್ರಗಢ​ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜಿರೋ ಎಫ್​ಐಆರ್​ ದಾಖಲು ಮಾಡಿಕೊಂಡಿರುವ ಪೊಲೀಸರು ಪ್ರಕರಣವನ್ನ ಗುರುಗ್ರಾಮ್​ಗೆ ಟ್ರಾನ್ಸ್​ಫರ್​ ಮಾಡಿದ್ದಾರೆ.

ಘಟನೆ ನಡೆದಿದ್ದು ಹೇಗೆ!?
ಸೆಪ್ಟೆಂಬರ್​​ 22ರಂದು ಪರೀಕ್ಷೆ ಬರೆಯಲು ತೆರಳಿದ್ದ ವೇಳೆ ಯುವತಿಗೆ ಸೋದರ ಸಂಬಂಧಿ ಪರಿಚಯವಾಗಿದ್ದಾನೆ. ಈ ವೇಳೆ ತನ್ನ ಹೊಟೇಲ್​ ರೂಮ್​ನಲ್ಲೇ ಉಳಿದುಕೊಳ್ಳುವಂತೆ ಆತ ಮನವಿ ಮಾಡಿಕೊಂಡಿದ್ದಾನೆ. ರಾತ್ರಿ ಯುವತಿ ಮಲಗಿಕೊಂಡಿದ್ದ ವೇಳೆ ಆಕೆ ಜತೆ ಅಸಭ್ಯವಾಗಿ ವರ್ತಿಸಿ, ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆ ವೇಳೆ ಪರೀಕ್ಷೆ ಇರುವ ಕಾರಣ ಘಟನೆ ಬಗ್ಗೆ ಯುವತಿ ಯಾರಿಗೂ ಮಾಹಿತಿ ನೀಡಿಲ್ಲ. ಇದಾದ ಬಳಿಕ ಮನೆಗೆ ಬಂದಿರುವ ಆಕೆ ಪೋಷಕರಿಗೆ ನಡೆದ ಘಟನೆಯ ಮಾಹಿತಿ ನೀಡಿದ್ದಾಳೆ. ಇದೀಗ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ABOUT THE AUTHOR

...view details