ಕುಲ್ಲು :ಪಿರ್ ಪಂಜಾಲ್ ಬೆಟ್ಟದ ಮೇಲಿರುವ ಅಟಲ್ ಟನಲ್ ಉತ್ತರ ಭಾಗದಲ್ಲಿ ಶೀಘ್ರದಲ್ಲೇ ಪ್ರವಾಸಿಗರು ದೇಶದಲ್ಲೇ ಅತ್ಯಂತ ಬೃಹತ್ ಭಗವಾನ್ ಬುದ್ಧನ ಪ್ರತಿಮೆ ನೋಡಲಿದ್ದಾರೆ. ಆಫ್ಘಾನಿಸ್ತಾನದ ಬಾಮಿಯನ್ ಬುದ್ಧನ ಮಾದರಿ 328ಅಡಿ (100 ಮೀ) ಎತ್ತರದ ಬುದ್ಧನ ಪ್ರತಿಮೆ ನಿರ್ಮಿಸಲಾಗುವುದು.
ಅದಕ್ಕಾಗಿ ಸುಮಾರು 500 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತೆ. ಹಿಮಾಚಲ ಪ್ರದೇಶ ರಾಜ್ಯ ಸರ್ಕಾರದ ಈ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ತನ್ನ ತಾತ್ವಿಕ ಅನುಮೋದನೆ ನೀಡಿದೆ. ಪ್ರತಿಮೆಯ ನಿರ್ಮಾಣವನ್ನು ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಮೇಲ್ವಿಚಾರಣೆಯಲ್ಲಿ ಗುಜರಾತ್‌ನ ಖಾಸಗಿ ಸಂಸ್ಥೆಗೆ ವಹಿಸಲಾಗುವುದು. ಪಿರ್ ಪಂಜಾಲ್ ಬೆಟ್ಟವನ್ನು ಕೆತ್ತಿಸಿ ಬುದ್ಧನ ಪ್ರತಿಮೆ ನಿರ್ಮಿಸಲಾಗುವುದು.