ಕರ್ನಾಟಕ

karnataka

ETV Bharat / bharat

ಕೊರೊನಾ ಗೆದ್ದ 94 ವರ್ಷದ ವೃದ್ಧೆ... ಡಿಸ್ಚಾರ್ಜ್​ ಆಗಿ ಹೇಳಿದ್ರು ಈ ಮಾತು!

ಮಹಾಮಾರಿ ಕೊರೊನಾ ವೈರಸ್​ ವಿರುದ್ಧ ಹೋರಾಟ ನಡೆಸಿ 94 ವರ್ಷದ ವೃದ್ಧೆಯೋರ್ವರು ಸಂಪೂರ್ಣವಾಗಿ ಗುಣಮುಖರಾಗಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.

94-year-old woman in Hyderabad
94-year-old woman in Hyderabad

By

Published : Jul 7, 2020, 4:35 AM IST

ಹೈದರಾಬಾದ್​(ತೆಲಂಗಾಣ):ದೇಶಾದ್ಯಂತ ಕೊರೊನಾ ಮಾಹಾಮಾರಿಯಿಂದ ಈಗಾಗಲೇ ಸಾವಿರಾರು ಜನರು ಸಾವನ್ನಪ್ಪಿದ್ದು, ಅದರ ಮಧ್ಯೆ ಕೆಲವರು ಪವಾಡ ಸದೃಶ ರೂಪದಲ್ಲಿ ಗುಣಮುಖರಾಗುತ್ತಿದ್ದಾರೆ.

ಮಹಾಮಾರಿ ಕೋವಿಡ್​ ಸೋಂಕಿಗೊಳಗಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ 94 ವರ್ಷದ ವೃದ್ಧೆಯೋರ್ವರು ಇದೀಗ ಸಂಪೂರ್ಣವಾಗಿ ಗುಣಮುಖರಾಗಿದ್ದು, ಡಿಸ್ಚಾರ್ಜ್​ ಆಗಿದ್ದಾರೆ. ಇಲ್ಲಿನ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ವಿಜಯಲಕ್ಷ್ಮೀ, ಹೈದರಾಬಾದ್​ನ ಚಿಕ್ಕಡಪಲ್ಲಿಯಲ್ಲಿ ವಾಸವಾಗಿದ್ದು, ಸೋಂಕು ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ದಾಖಲು ಮಾಡಲಾಗಿತು.

ಕೊರೊನಾ ಗೆದ್ದ 94 ವರ್ಷದ ವೃದ್ಧೆ

ಅವರು ತಿಳಿಸಿರುವ ಪ್ರಕಾರ, ಪ್ರತಿದಿನ ನರ್ಸ್​, ವೈದ್ಯರು ತಪಾಸಣೆಗಾಗಿ ಬರುತ್ತಿದ್ದು, ತಮ್ಮನ ಸರಿಯಾಗಿ ನೋಡಿಕೊಂಡಿದ್ದಾರೆ ಎಂದಿದ್ದಾರೆ. ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಸೌಕರ್ಯವಿದ್ದು, ಉತ್ತಮ ರೀತಿಯ ಆಹಾರ ಒದಗಿಸಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ. ತೆಲಂಗಾಣದಲ್ಲಿ ನಿನ್ನೆ ಬರೋಬ್ಬರಿ 1,831 ಹೊಸ ಪ್ರಕರಣ ಕಾಣಿಸಿಕೊಂಡಿದ್ದು, 7 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ ರಾಜ್ಯದಲ್ಲಿ 25,733 ಪ್ರಕರಣಗಳಲ್ಲಿ 10,646 ಸಕ್ರಿಯ ಪ್ರಕರಣಗಳಿದ್ದು, 14,781 ಜನರು ಡಿಸ್ಚಾರ್ಜ್​ ಆಗಿದ್ದಾರೆ.

ABOUT THE AUTHOR

...view details