ನವದೆಹಲಿ: 91 ವರ್ಷದ ವೃದ್ಧನನ್ನ ರೆಫ್ರಿಜರೇಟರ್ನಲ್ಲಿ ಅಪಹರಣಗೈದ ಮನೆ ಕೆಲಸದಾತ ಮತ್ತು ಆತನ ನಾಲ್ಕು ಜನ ಸ್ನೇಹಿತರು ವೃದ್ಧನನ್ನ ಕೊಲೆ ಮಾಡಿರುವ ಘಟನೆ ನಡೆದಿದೆ.
ಕಳೆದ ಶನಿವಾರ ರಾತ್ರಿ ಮನೆಗ ಬಂದ ಕೆಲಸದಾತ ವೃದ್ಧನಿಗೆ ಟೀ ಮಾಡಿ ಕೊಟ್ಟಿದ್ದಾನೆ. ಕೆಲ ಕ್ಷಣದಲ್ಲೇ ಆತನ ಸ್ನೇಹಿತರು ಟೆಂಪೋ ತೆಗೆದುಕೊಂಡು ಅಲ್ಲಿಗೆ ಬಂದಿದ್ದಾರೆ. ಮನೆಯಿಂದ ರೆಫ್ರಿಜರೇಟರ್ ಮತ್ತು ಕೆಲ ವಸ್ತುಗಳನ್ನ ತೆಗೆದುಕೊಂಡು ಹೋಗಿ ಟೆಂಪೋನಲ್ಲಿ ಇರಿಸಿದ್ದಾರೆ. ಇದನ್ನ ಗಮನಿಸಿದ ಸೆಕ್ಯೂರಿಟಿಗಾರ್ಡ್ ಪ್ರಶ್ನೆ ಮಾಡಿದ್ದಕ್ಕೆ ಹಳೆಯದಾಗಿದ್ದು, ಮಾಲೀಕರೇ ನೀಡಿದ್ದಾರೆ ಎಂದು ತಿಳಿಸಿದ್ದಾನೆ.
ಮುಂಜಾನೆ 5ಗಂಟೆಗೆ ನಿದ್ದೆಯಿಂದ ಎದ್ದ ವೃದ್ಧನ ಪತ್ನಿ ಮನೆ ಕೆಲಸದ ವ್ಯಕ್ತಿ ಮತ್ತು ಅಕೆಯ ಪತಿ ಮನೆಯಲ್ಲಿ ಇಲ್ಲದಿರುವುದನ್ನ ಗಮನಿಸಿ ದೂರು ನೀಡಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ಪರ್ವೀಂದರ್ ಸಿಂಗ್ ತಿಳಿಸಿದ್ದಾರೆ.
ಸೆಕ್ಯೂರಿಟಿ ಗಾರ್ಡ್ ಮಾಹಿತಿಯಂತೆ ವೃದ್ಧನನ್ನ ರೆಫ್ರಿಜರೇಟರ್ನಲ್ಲಿ ಅಪಹರಣ ಮಾಡಿರಬಹುದೆಂದು ಅನುಮಾನಿಸಲಾಗಿದೆ. ಈ ಬಗ್ಗೆ ಯಾವುದೇ ಪ್ರತ್ಯಕ್ಷ ಸಾಕ್ಷಿ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದರ ಬೆನ್ನಲ್ಲೇ ನವದೆಹಲಿಯ ಟಿಗ್ರಿ ಎಂಬಲ್ಲಿ ವೃದ್ಧನ ಕೊಲೆಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.