ನವದೆಹಲಿ: ಮೂರು ಕೃಷಿ ಕಾನೂನು ಅನುಷ್ಠಾನಕ್ಕೆ ತಡೆಯಾಜ್ಞೆ ತರುವ ಸುಪ್ರೀಂಕೋರ್ಟ್‌ನ ಮಹತ್ತರ ಆದೇಶದ ಬಳಿಕ ಶೇ.90ರಷ್ಟು ರೈತರು ಆಂದೋಲನ ಮುಂದುವರಿಸುವ ಆಸಕ್ತಿ ಹೊಂದಿಲ್ಲ ಎಂದು ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಐ) ಮಾಹಿತಿ ನೀಡಿದೆ.
ಕೃಷಿ ಮಸೂದೆಗಳ ಅನುಷ್ಠಾನಕ್ಕೆ ತಾತ್ಕಾಲಿಕ ತಡೆ ನೀಡಿದ ಸುಪ್ರೀಂ ಆದೇಶದ ಬಳಿಕ ಶೇ.90 ರಷ್ಟು ರೈತರು ಆಂದೋಲನ ಮುಂದುವರಿಸುವರರ ಪರವಾಗಿಲ್ಲ. ಆದರೆ, ಕೆಲವರ ವೈಯಕ್ತಿಕ ರಾಜಕೀಯ ಲಾಭಕ್ಕಾಗಿ ಆಂದೋಲನ ಮುಂದುವರಿಸುವ ಪ್ರಯತ್ನದಲ್ಲಿದ್ದಾರೆ ಎಂದು ಬಾರ್ ಕೌನ್ಸಿಲ್ ಆಫ್ ಇಂಡಿಯಾ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಹೇಳಿದ್ದಾರೆ.
ರೈತರ ಆಂದೋಲನ ವಿಚಾರದಲ್ಲಿ ಸುಪ್ರೀಂಕೋರ್ಟ್ ನೀಡಿದ ಆದೇಶವನ್ನು ಈ ದೇಶದ ವಿವೇಕಯುತ ಪ್ರಜೆಗಳು ಶ್ಲಾಘಿಸುತ್ತಾರೆ. ದೇಶದ ಹಿತದೃಷ್ಟಿಯ ಉದ್ದೇಶದಿಂದ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ ಎಂದು ಮಿಶ್ರಾ ಹೇಳಿದ್ದಾರೆ.