ಕರ್ನಾಟಕ

karnataka

ETV Bharat / bharat

90 ಕೋಟಿ ರೂ. ದಂಡ ಕಲೆ ಹಾಕಿದ ಸರ್ಕಾರ, ಕೊರೊನಾ ನಿಯಮಾವಳಿ ಜಾರಿಗೆ ವಿಫಲ: ಸುಪ್ರೀಂಕೋರ್ಟ್

ಮಾಸ್ಕ್​ಗಳನ್ನು ಹಾಕದಿರಲು ಗುಜರಾತ್ ಸರ್ಕಾರ 90 ಕೋಟಿ ರೂ.ಗಳನ್ನು ದಂಡವಾಗಿ ವಸೂಲಿ ಮಾಡಿದೆ. ಆದರೆ, ಅದರ ಹೊರತಾಗಿಯೂ, ಕೋವಿಡ್‌ನ ಮಾರ್ಗಸೂಚಿಗಳನ್ನು ಜಾರಿಗೆ ತರಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

By

Published : Dec 16, 2020, 3:49 PM IST

ನವದೆಹಲಿ:ಗುಜರಾತ್‌ನಲ್ಲಿ ಮಾಸ್ಕ್​ ಧರಿಸದ ಜನರಿಂದ 90 ಕೋಟಿ ರೂಪಾಯಿ ದಂಡವನ್ನು ಕಲೆ ಹಾಕಲಾಗಿದೆ. ಗುಜರಾತ್ ಸರ್ಕಾರ ಮಾಸ್ಕ್​ ಧರಿಸದ ಕಾರಣ 90 ಕೋಟಿ ರೂ.ಗಳ ದಂಡವನ್ನು ವಿಧಿಸಿದೆ. ಆದರೆ ಕೋವಿಡ್ ತಡೆಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಸರಿಯಾದ ರೀತಿಯಲ್ಲಿ ಜಾರಿಗೆ ತರಲು ಸಾಧ್ಯವಾಗಲಿಲ್ಲ ಎಂದು ಸುಪ್ರೀಂಕೋರ್ಟ್ ಆಶ್ಚರ್ಯ ವ್ಯಕ್ತಪಡಿಸಿದೆ.

ರಾಜ್‌ಕೋಟ್‌ನ ಆಸ್ಪತ್ರೆಗೆ 16 ನೋಟಿಸ್‌ಗಳನ್ನು ಕಳುಹಿಸಲಾಗಿದೆ. ಆದರೆ, ಇದರ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಗುಜರಾತ್‌ನ ಅನೇಕ ಆಸ್ಪತ್ರೆಗಳಲ್ಲಿ ಅಗ್ನಿ ಸುರಕ್ಷತೆಗೆ ಸಂಬಂಧಿಸಿದ ಎನ್‌ಒಸಿ ಇಲ್ಲ. ಗುಜರಾತ್‌ನ 260 ಖಾಸಗಿ ಆಸ್ಪತ್ರೆಗಳ ಪೈಕಿ 61 ಆಸ್ಪತ್ರೆಗಳಲ್ಲಿ ಎನ್‌ಒಸಿ ಇಲ್ಲ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.

ಇದನ್ನೂ ಓದಿ:ಗುಜರಾತ್​ನಲ್ಲಿ ಭೂ ಕಬಳಿಕೆ ತಡೆ ಕಾನೂನು: ಅಪರಾಧಿಗಳಿಗೆ 14 ವರ್ಷ ಜೈಲು

ಮಾಸ್ಕ್​ಗಳನ್ನು ಹಾಕದಿರಲು ಗುಜರಾತ್ ಸರ್ಕಾರ 90 ಕೋಟಿ ರೂ.ಗಳನ್ನು ದಂಡವಾಗಿ ವಸೂಲಿ ಮಾಡಿದೆ. ಆದರೆ ಅದರ ಹೊರತಾಗಿಯೂ, ಕೋವಿಡ್‌ನ ಮಾರ್ಗಸೂಚಿಗಳನ್ನು ಜಾರಿಗೆ ತರಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ.

ABOUT THE AUTHOR

...view details