ಮುಂಬೈ:ಮುಂಬೈನ ಸಮತಾ ನಗರದಲ್ಲಿ ಅನಿಲ ಸೋರಿಕೆಯಿಂದಾಗಿ ಕೊಳೆಗೇರಿ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕನಿಷ್ಠ ಒಂಬತ್ತು ಜನರಿಗೆ ಸುಟ್ಟ ಗಾಯಗಳಾಗಿವೆ.
ಮಹಾನಗರಿಯ ಕೊಳೆಗೇರಿ ಪ್ರದೇಶದಲ್ಲಿ ಬೆಂಕಿ: 9 ಮಂದಿಗೆ ಗಾಯ - ಶತಬ್ದಿ ಆಸ್ಪತ್ರೆಯ ಸಹಾಯಕ ವೈದ್ಯಕೀಯ ಅಧಿಕಾರಿ
ನಿನ್ನೆ ತಡರಾತ್ರಿ ಸಮತಾ ನಗರದ ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ 9 ಜನರು ಗಾಯಗೊಂಡಿದ್ದಾರೆ. ಬೆಂಕಿ ನಂದಿಸಲಾಗಿದ್ದು, ಗಾಯಾಳುಗಳನ್ನು ಶತಾಬ್ದಿ ಆಸ್ಪತ್ರೆಗೆ ದಾಖಲಿಸಲಾಗಿದೆ.
![ಮಹಾನಗರಿಯ ಕೊಳೆಗೇರಿ ಪ್ರದೇಶದಲ್ಲಿ ಬೆಂಕಿ: 9 ಮಂದಿಗೆ ಗಾಯ 9 injured as fire breaks out after gas leakage in Mumbai](https://etvbharatimages.akamaized.net/etvbharat/prod-images/768-512-6056386-thumbnail-3x2-mnd.jpg)
ಅನಿಲ ಸೋರಿಕೆ, ಮುಂಬೈ ಕೊಳೆಗೇರಿ ಪ್ರದೇಶದಲ್ಲಿ ಬೆಂಕಿ: 9 ಮಂದಿಗೆ ಗಾಯ
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಲ್ಕು ಜನರಿಗೆ ಚಿಕಿತ್ಸೆ ನೀಡಲಾಗಿದ್ದು, ಗುಣಮುಖರಾಗಿದ್ದಾರೆ ಎಂದು ಶತಾಬ್ದಿ ಆಸ್ಪತ್ರೆಯ ಸಹಾಯಕ ವೈದ್ಯಕೀಯ ಅಧಿಕಾರಿ (ಎಎಂಒ) ಡಾ.ಸಮೀಧಾ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲು ಯಶಸ್ವಿಯಾಗಿದ್ದಾರೆ.