ಕರ್ನಾಟಕ

karnataka

ETV Bharat / bharat

ಉತ್ತರಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ: 9 ಜನ ಸ್ಥಳದಲ್ಲೇ ದುರ್ಮರಣ - ರಸ್ತೆ ಅಪಘಾತದಲ್ಲಿ 9 ಜನ ಸಾವು ಸುದ್ದಿ

ಉತ್ತರಪ್ರದೇಶದ ಪ್ರತಾಪಗಢ ಹೆದ್ದಾರಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತವೊಂದರಲ್ಲಿ ಬಿಹಾರ ಮೂಲದ 9 ಮಂದಿ ಮೃತಪಟ್ಟಿದ್ದಾರೆ.

scorpio with truck in pratapgarh
9 ಜನ ಸ್ಥಳದಲ್ಲೇ ದುರ್ಮರಣ

By

Published : Jun 5, 2020, 9:53 AM IST

ಪ್ರತಾಪ್​ಗಢ (ಉತ್ತರಪ್ರದೇಶ): ಲಕ್ನೋ - ಪ್ರಯಾಗ್​ರಾಜ್​ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಕಾರ್ಪಿಯೋ ಮತ್ತು ಟ್ರಕ್​ ಮುಖಾಮುಖಿ ಡಿಕ್ಕಿಯಾದ ಪರಿಣಾಮ 9 ಜನ ಸಾವನ್ನಪ್ಪಿದ್ದಾರೆ.

ಅಪಘಾತದಲ್ಲಿ ನಜ್ಜುಗುಜ್ಜಾದ ವಾಹನ

ವಾಬ್‌ಗಂಜ್‌ನ ವಾಜಿದ್‌ಪುರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ. ರಾಜಸ್ಥಾನದಿಂದ ಬಿಹಾರಕ್ಕೆ ಹೋಗುತ್ತಿದ್ದ ವೇಳೆ ಈ ದುರ್ಘಟನೆ ಘಟಿಸಿದೆ. ಬಲಿಯಾದವರಲ್ಲಿ ನಾಲ್ವರು ಪುರುಷರು, ಇಬ್ಬರು ಮಕ್ಕಳು ಮತ್ತು ಮೂವರು ಮಹಿಳೆಯರು ಸೇರಿದ್ದಾರೆ. ಇವರೆಲ್ಲಾ ರಾಜಸ್ಥಾನದಲ್ಲಿ ಕೆಲಸ ಮಾಡುತ್ತಿದ್ದು, ಬಿಹಾರ ರಾಜ್ಯದ ತಮ್ಮ ಮನೆಗೆ ಸ್ಕಾರ್ಪಿಯೋ ದಲ್ಲಿ ವಾಪಸ್ಸಾಗುತ್ತಿದ್ದರು.

ಘಟನಾ ಸ್ಥಳದ ದೃಶ್ಯ

ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು,ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ABOUT THE AUTHOR

...view details