ಕರ್ನಾಟಕ

karnataka

ETV Bharat / bharat

ವಾಯುಪಡೆಯ 87ನೇ ವಾರ್ಷಿಕ ದಿನಾಚರಣೆ : ಶುಭಕೋರಿದ ಪ್ರಧಾನಿ ಮೋದಿ, ಅಮಿತ್ ಶಾ - ನರೇಂದ್ರ ಮೋದಿ

ಭಾರತೀಯ ವಾಯುಪಡೆಯ 87ನೇ ವಾರ್ಷಿಕ ದಿನದ ನಿಮಿತ್ತ ಟ್ವೀಟ್ ಮೂಲಕ ಶುಭ ಕೋರಿದ ಅಮಿತ್ ಶಾ, ತಾಯ್ನಾಡಿನ ರಕ್ಷಣೆಯ ಬಗ್ಗೆ ಭಾರತೀಯ ವಾಯುಪಡೆ ತೋರಿಸುವ ಬದ್ಧತೆ ಮತ್ತು ಸಮರ್ಪಣಾ ಮನೋಭಾವನೆಯ ಇಡೀ ಭಾರತವೇ ಹೆಮ್ಮೆ ಪಡುತ್ತದೆ ಎಂದಿದ್ದಾರೆ.

By

Published : Oct 8, 2019, 3:49 PM IST

ನವದೆಹಲಿ: ಭಾರತೀಯ ವಾಯುಪಡೆಯ ಬಗ್ಗೆ ದೇಶಕ್ಕೆ ಹೆಮ್ಮೆಯಿದ್ದು, ಭಾರತೀಯ ವಾಯುಪಡೆಯು ಶೌರ್ಯ ಹಾಗೂ ಧೈರ್ಯದ ಸಂಕೇತವಾಗಿದೆ ಎಂದು ಅಮಿತ್ ಶಾ ಬಣ್ಣಿಸಿದ್ದಾರೆ.

ಭಾರತೀಯ ವಾಯುಪಡೆಯ 87ನೇ ವಾರ್ಷಿಕ ದಿನದ ನಿಮಿತ್ತ ಟ್ವೀಟ್ ಮೂಲಕ ಶುಭ ಕೋರಿದ ಅಮಿತ್ ಶಾ, ತಾಯ್ನಾಡಿನ ರಕ್ಷಣೆಯ ಬಗ್ಗೆ ಭಾರತೀಯ ವಾಯುಪಡೆ ತೋರಿಸುವ ಬದ್ಧತೆ ಮತ್ತು ಸಮರ್ಪಣಾ ಮನೋಭಾವನೆಯ ಇಡೀ ಭಾರತವೇ ಹೆಮ್ಮೆ ಪಡುತ್ತದೆ ಎಂದಿದ್ದಾರೆ.

ಇನ್ನು ಪ್ರಧಾನಿ ನರೇಂದ್ರ ಮೋದಿ ಕೂಡ ವಾಯುಪಡೆಯ ಧೀರ ಯೋಧರನ್ನು ಸ್ಮರಿಸಿದ್ದು, ವಾಯುಪಡೆಯ ಯೋಧರು ಹಾಗೂ ಕುಟುಂಬಗಳಿಗೆ ಇಡೀ ರಾಷ್ಟ್ರವೇ ಕೃತಜ್ಞತೆ ಸಲ್ಲಿಸುತ್ತದೆ ಎಂದು ಹೇಳಿದ್ದಾರೆ. 87ನೇ ವಾಯುಸೇನಾ ದಿನ ಹಿನ್ನಲೆ ಟ್ವೀಟ್ ಮಾಡಿರುವ ಪ್ರಧಾನಿ, ವಾಯುಪಡೆ ಅತ್ಯಂತ ಸಮರ್ಪಣೆ ಹಾಗೂ ಉತ್ಕೃಷ್ಟತೆಯಿಂದ ರಾಷ್ಟ್ರಕ್ಕೆ ಸೇವೆ ಸಲ್ಲಿಸುತ್ತದೆ ಎಂದು ಸ್ಮರಿಸಿದ್ದಾರೆ.

ABOUT THE AUTHOR

...view details