ಜೈಪುರ :ರಾಜಸ್ಥಾನದಲ್ಲಿ ಬುಧವಾರ 87 ಹೊಸ ಕೊರೊನಾ ಪ್ರಕರಣ ಪತ್ತೆಯಾಗಿವೆ. ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 4,213ಕ್ಕೆ ತಲುಪಿದೆ. ಈವರೆಗೆ 117 ಮಂದಿ ಸೋಂಕಿಗೆ ಬಲಿಯಾಗಿದ್ದು, ಜೈಪುರದಲ್ಲಿ 60 ಸಾವು ಸಂಭವಿಸಿವೆ.
ರಾಜಸ್ಥಾನದಲ್ಲಿ ಕೋವಿಡ್ ಸಂಕಟ: ಇಂದೇ 87 ಹೊಸ ಸೋಂಕಿತರು ಪತ್ತೆ - ರಾಜಸ್ಥಾನ ಕೊರೊನಾ ಅಪ್ಡೇಟ್
ಜೈಪುರದ ಪಾಲಿಯಲ್ಲಿ 24 ಹೊಸ ಪ್ರಕರಣಗಳು ವರದಿಯಾಗಿವೆ. ಇನ್ನುಳಿದಂತೆ ಉದಯಪುರದಲ್ಲಿ 12, ರಾಜ್ ಸಮಂದ್ನಲ್ಲಿ 7, ಸ್ವೈ ಮದೋಪುರದಲ್ಲಿ 5, ಕೋಟಾದಲ್ಲಿ 3, ಟೋಂಕ್‌ನಲ್ಲಿ 2 ಮತ್ತು ಬನ್ಸಾವಾರ್, ಭರತ್‌ಪುರ ಮತ್ತು ನಾಗೌರ್‌ನಲ್ಲಿ ತಲಾ ಒಂದು ಹೊಸ ಪ್ರಕರಣ ದಾಖಲಾಗಿವೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರೋಹಿತ್ ಕುಮಾರ್‌ಸಿಂಗ್, ಇಂದು ಜೈಪುರದಲ್ಲಿ 32 ಸೇರಿದಂತೆ ರಾಜ್ಯದ 10 ಜಿಲ್ಲೆಗಳಲ್ಲಿ ಇಂದು 87 ಹೊಸ ಪ್ರಕರಣಗಳು ದಾಖಲಾಗಿವೆ. ಜೈಪುರದ ಪಾಲಿಯಲ್ಲಿ 24 ಪ್ರಕರಣ ವರದಿಯಾಗಿವೆ. ಇನ್ನುಳಿದಂತೆ ಉದಯಪುರದಲ್ಲಿ 12, ರಾಜ್ ಸಮಂದ್ನಲ್ಲಿ 7, ಸ್ವೈ ಮದೋಪುರದಲ್ಲಿ 5, ಕೋಟಾದಲ್ಲಿ 3, ಟೋಂಕ್‌ನಲ್ಲಿ 2 ಮತ್ತು ಬನ್ಸಾವಾರ್, ಭರತ್‌ಪುರ ಮತ್ತು ನಾಗೌರ್‌ನಲ್ಲಿ ತಲಾ ಒಂದು ಹೊಸ ಪ್ರಕರಣ ದಾಖಲಾಗಿವೆ ಎಂದು ತಿಳಿಸಿದ್ದಾರೆ.
ಈವರೆಗೆ 2,455 ಜನರ ವರದಿ ನೆಗೆಟಿವ್ ಬಂದಿವೆ. 2,159 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಮತ್ತು 1,641 ಸಕ್ರಿಯ ಪ್ರಕರಣಗಳಿವೆ ಎಂದು ಮಾಹಿತಿ ನೀಡಿದ್ದಾರೆ. ಮಾರ್ಚ್ 22 ರಿಂದ ರಾಜ್ಯ ಲಾಕ್ಡೌನ್ನಲ್ಲಿದೆ ಮತ್ತು ಸೋಂಕಿತರನ್ನು ಪತ್ತೆ ಹಚ್ಚಲು ಬೃಹತ್ ಸಮೀಕ್ಷೆ ಮತ್ತು ತಪಾಸಣೆ ನಡೆಯುತ್ತಿದೆ.