ನವದೆಹಲಿ:ದೇಶದಲ್ಲಿನ ಒಟ್ಟು ಕೊರೊನಾ ಕೇಸ್ಗಳ ಪೈಕಿ ಶೇ.86ರಷ್ಟು ಸೋಂಕು 10 ರಾಜ್ಯಗಳಿಂದ ಕಂಡು ಬಂದಿದೆ. ಇದರಲ್ಲಿ ಶೇ.50ರಷ್ಟು ಪ್ರಕರಣಗಳು ಮಹಾರಾಷ್ಟ್ರ ಹಾಗೂ ತಮಿಳುನಾಡಿನಲ್ಲಿ ಕಂಡು ಬಂದಿವೆ ಎಂದು ಆರೋಗ್ಯ ಇಲಾಖೆ ಮುಖ್ಯಸ್ಥ ರಾಜೇಶ್ ಭೂಷಣ್ ತಿಳಿಸಿದ್ದಾರೆ. ಇನ್ನುಳಿದಂತೆ ಶೇ.36ರಷ್ಟು ಸೋಂಕಿತ ಪ್ರಕರಣಗಳು ರಾಷ್ಟ್ರದೆಲ್ಲೆಡೆಯಿಂದ ದಾಖಲಾಗಿದೆ ಎಂದು ಅವರು ವಿವರಿಸಿದರು.
10 ರಾಜ್ಯಗಳಿಂದ ಶೇ 86 ರಷ್ಟು ಸೋಂಕು: ಮಹಾರಾಷ್ಟ್ರ, ತಮಿಳುನಾಡಿನದ್ದು ಸಿಂಹಪಾಲು - ಕೇಂದ್ರ ಆರೋಗ್ಯ ಇಲಾಖೆ
ಸದ್ಯ ದೇಶದಲ್ಲಿ ಸಕ್ರಿಯ ಪ್ರಕರಣಗಳಿಗಿಂತಲೂ ಗುಣಮುಖರಾಗಿರುವ ಸಂಖ್ಯೆ ಹೆಚ್ಚಾಗಿದೆ ಅನ್ನೋದು ತುಸು ನೆಮ್ಮದಿಯ ವಿಚಾರವಾಗಿದೆ.
Rajesh Bhushan
ದೇಶದ 20 ರಾಜ್ಯಗಳಲ್ಲಿ ಕೋವಿಡ್ ಚೇತರಿಕೆ ರಾಷ್ಟ್ರೀಯ ಸರಾಸರಿಗಿಂತಲೂ ಹೆಚ್ಚಾಗಿದೆ. ಸದ್ಯ ದೇಶದ ಸರಾಸರಿ ಶೇ.63ರಷ್ಟಿದೆ ಎಂದು ಅವರು ತಿಳಿಸಿದ್ದಾರೆ.
ಉತ್ತರಪ್ರದೇಶದಲ್ಲಿ ಚೇತರಿಕೆ ಪ್ರಮಾಣ ಶೇ.64, ಒಡಿಶಾ ಶೇ 67, ಅಸ್ಸೋಂ ಶೇ.65, ಗುಜರಾತ್ ಶೇ70 ಹಾಗೂ ತಮಿಳುನಾಡಿನಲ್ಲಿ ಶೇ 65ರಷ್ಟಿದೆ. ಸದ್ಯ ದೇಶದಲ್ಲಿ ಸಕ್ರಿಯ ಪ್ರಕರಣಗಳಿಗಿಂತಲೂ ಗುಣಮುಖರಾಗಿರುವ ಸಂಖ್ಯೆ ಹೆಚ್ಚಾಗಿದೆ ಅನ್ನೋದು ತುಸು ನೆಮ್ಮದಿಯ ವಿಚಾರವಾಗಿದೆ.