ನಲ್ಗೊಂಡ(ತೆಲಂಗಾಣ):ಕಾಮುಕನೋರ್ವ ಕುಡಿದ ಮತ್ತಿನಲ್ಲಿ 85 ವರ್ಷದ ವೃದ್ಧೆ ಮೇಲೆ ಪೈಶಾಚಿಕ ಕೃತ್ಯವೆಸಗಿದ್ದು, ನಂತರ ಆಕೆಯನ್ನು ಕೊಂದಿರುವ ಘಟನೆ ತೆಲಂಗಾಣದ ನಲ್ಗೊಂಡದಲ್ಲಿ ನಡೆದಿದೆ.
ಕುಡಿದ ಮತ್ತಿನಲ್ಲಿ ವೃದ್ಧೆ ಮೇಲೆ ಅತ್ಯಾಚಾರ-ಕೊಲೆ! - ತೆಲಂಗಾಣದ ನಲ್ಗೊಂಡ
ಕುಡಿದ ಮತ್ತಿನಲ್ಲಿ ಕಾಮುಕನೋರ್ವ 85 ವರ್ಷದ ವೃದ್ಧೆ ಮೇಲೆ ಅತ್ಯಾಚಾರವೆಸಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
85 year woman raped by drunkard in marepalli
ಕಂಠಪೂರ್ತಿ ಕುಡಿದ ವ್ಯಕ್ತಿ ನಲ್ಗೊಂಡ ಜಿಲ್ಲೆಯ ಅನುಮುಲಾ ಮಂಡಲ್ ಪ್ರದೇಶದಲ್ಲಿ ವಾಸವಾಗಿದ್ದ 85 ವರ್ಷದ ವೃದ್ಧೆ ಮೇಲೆ ಅತ್ಯಾಚಾರವೆಸಗಿದ್ದಾನೆ. ಘಟನೆ ಬಗ್ಗೆ ವೃದ್ಧೆ ಬೇರೆಯವರಿಗೆ ಹೇಳುತ್ತಾಳೆ ಎಂದು ಹೆದರಿ ಆಕೆಯನ್ನ ಕೊಲೆ ಮಾಡಿದ್ದಾನೆ. ಇದನ್ನ ನೋಡಿರುವ ವೃದ್ಧೆಯ ಸೊಸೆ ಬೇರೆಯವರಿಗೆ ಮಾಹಿತಿ ನೀಡಿದ್ದಾಳೆ.
ಸ್ಥಳಕ್ಕಾಗಮಿಸಿರುವ ನೆರೆಹೊರೆಯವರು ಆತನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಪ್ರಕರಣ ದಾಖಲು ಮಾಡಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.