ಉತ್ತರಪ್ರದೇಶ :847 ವಲಸೆ ಕಾರ್ಮಿಕರನ್ನ ಹೊತ್ತ ಮೊದಲ ವಲಸೆ ಕಾರ್ಮಿಕರ ವಿಶೇಷ ರೈಲು ಮಹಾರಾಷ್ಟ್ರದ ನಾಸಿಕ್ನಿಂದ ಉತ್ತರಪ್ರದೇಶದ ಲಖನೌ ತಲುಪಿದೆ.
ವಲಸೆ ಕಾರ್ಮಿಕರ ವಿಶೇಷ ರೈಲಿನ ಮೂಲಕ ಲಖನೌ ತಲುಪಿದ 847 ಕಾರ್ಮಿಕರು.. - ಲಕ್ನೋ ರೈಲು ನಿಲ್ದಾಣ
ಮಹಾರಾಷ್ಟ್ರದ ನಾಸಿಕ್ನಲ್ಲಿದ್ದ ಉತ್ತರಪ್ರದೇಶದ 847 ವಲಸೆ ಕಾರ್ಮಿಕರನ್ನ 847 ವಲಸೆ ಕಾರ್ಮಿಕರನ್ನ ವಲಸೆ ಕಾರ್ಮಿಕರ ವಿಶೇಷ ರೈಲಿನ ಮೂಲಕ ಲಕ್ನೋ ರೈಲು ನಿಲ್ದಾಣದಲ್ಲಿ ಅಲ್ಲಿನ ನಾಗರೀಕ ಆಡಳಿತಕ್ಕೆ ಒಪ್ಪಿಸಲಾಗಿದೆ.
ಲಾಕ್ಡೌನ್ನಿಂದಾಗಿ ದೇಶದ ವಿವಿಧ ಸ್ಥಳಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳುವುದಕ್ಕಾಗಿ ಈ ವಿಶೇಷ ರೈಲು ಆರಂಭಿಸಲಾಗಿದೆ. ಮಹಾರಾಷ್ಟ್ರದ ನಾಸಿಕ್ನಲ್ಲಿದ್ದ ಉತ್ತರಪ್ರದೇಶದ 847 ವಲಸೆ ಕಾರ್ಮಿಕರನ್ನ ವಿಶೇಷ ರೈಲಿನ ಮೂಲಕ ಲಖನೌ ರೈಲು ನಿಲ್ದಾಣದಲ್ಲಿ ಅಲ್ಲಿನ ನಾಗರಿಕ ಆಡಳಿತಕ್ಕೆ ಒಪ್ಪಿಸಲಾಗಿದೆ. ಈ ರೈಲು ತಲುಪುವ ಮುನ್ನ, ಸುರಕ್ಷತೆಗಾಗಿ ಲಖನೌ ರೈಲು ನಿಲ್ದಾಣದಲ್ಲಿ ಬ್ಯಾರಿಕೇಡ್ ಹಾಕಿ, ಟಿಕೇಟ್ ಪರಿಶೀಲನಾ ಸಿಬ್ಬಂದಿ, ಆರ್‌ಪಿಎಫ್, ಜಿಆರ್‌ಪಿ ಮತ್ತು ಸ್ಥಳೀಯ ಪೊಲೀಸ್ ಸಿಬ್ಬಂದಿಯನ್ನ ನಿಯೋಜಿಸಲಾಗಿತ್ತು.
ಸರದಿಯಲ್ಲಿ ಬಂದಿಳಿದ ವಲಸೆ ಕಾರ್ಮಿಕರಿಗೆ ರಾಜ್ಯ ಸರ್ಕಾರಿ ಅಧಿಕಾರಿಗಳು ಸ್ಕ್ರೀನಿಂಗ್ ಮಾಡಿ ಆರೋಗ್ಯ ಪರಿಶೀಲಿಸಿದರು. ಬಳಿಕ ವಲಸೆ ಕಾರ್ಮಿಕರಿಗೆ ಆಯಾ ಊರುಗಳಿಗೆ ತೆರಳಲು ಬಸ್ ವ್ಯವಸ್ಥೆ ಮಾಡಲಾಯ್ತು. ಸಾಮಾಜಿಕ ಅಂತರ ಕಾಯ್ದುಕೊಂಡು ಬಸ್ ಹತ್ತುವಂತೆ ಅಧಿಕಾರಿಗಳು ತಿಳಿಸಿದ್ರು. ಅಲ್ಲದೆ ಪ್ರಯಾಣಿಕರಿಗೆ ಆಹಾರ ಪ್ಯಾಕೇಟ್‌ಗಳನ್ನ ನೀಡಿ ಅವರವರ ಊರುಗಳಿಗೆ ಕಳುಹಿಸಿದ್ದಾರೆ.