ಕರ್ನಾಟಕ

karnataka

ETV Bharat / bharat

ಆನ್​ಲೈನ್​ ಬಳಕೆದಾರರೇ ​ನೀವಿನ್ನೂ ಅದೇ 'ಪಾಸ್​ವರ್ಡ್'​ ಬಳಸುತ್ತಿದ್ದೀರಾ? ಸೈಬರ್‌ ಸೆಕ್ಯುರಿಟಿ ಸಂಶೋಧಕರು ಏನಂತಾರೆ ಕೇಳಿ - ಶೇ, 83ರಷ್ಟು ಆನ್‌ಲೈನ್ ಬಳಕೆದಾರರು

ಕ್ಯಾಸ್ಪರ್ಸ್ಕಿ ವರದಿಯ ಪ್ರಕಾರ, ಇಂದು ಹೆಚ್ಚಿನ ಸಂಖ್ಯೆಯ ಅಪ್ಲಿಕೇಶನ್‌ಗಳು ಅಗತ್ಯವಿರುವ ಕಾರಣ, ಸಂಕೀರ್ಣ ಪಾಸ್‌ವರ್ಡ್‌ಗಳಿಗಾಗಿ ಭಿನ್ನವಾದ ಸಂಖ್ಯೆಯನ್ನು ನೀಡುವುದು ಹಾಗೂ ಅವುಗಳನ್ನು ನೆನಪಿನಲ್ಲಿಡುವುದು ಕಷ್ಟವಾಗಬಹುದು. ವಿಶೇಷವಾಗಿ ಬಳಕೆದಾರರು ತಮ್ಮ ಪಾಸ್‌ವರ್ಡ್‌ಗಳನ್ನು ನಿರಂತರವಾಗಿ ಬದಲಾಯಿಸಬೇಕಾದಾಗ ಈ ಸಮಸ್ಯೆ ಎದುರಾಗುತ್ತದೆ.

83-percent-online-users-think-up-their-own-weak-passwords
ಸೈಬರ್‌ ಸೆಕ್ಯುರಿಟಿ

By

Published : May 24, 2020, 5:07 PM IST

ನವದೆಹಲಿ:ಪಾಸ್‌ವರ್ಡ್‌ಗಳನ್ನು ಸಂಗ್ರಹಿಸುವ ಅಗತ್ಯತೆಯನ್ನು ಎತ್ತಿ ತೋರಿಸುತ್ತಾ, ಸೈಬರ್‌ ಸೆಕ್ಯುರಿಟಿ ಸಂಶೋಧಕರು ಶೇ. 83ರಷ್ಟು ಆನ್‌ಲೈನ್ ಬಳಕೆದಾರರು ತಮ್ಮದೇ ಆದ ದುರ್ಬಲ ಪಾಸ್‌ವರ್ಡ್‌ಗಳನ್ನು ಬಳಸುತ್ತಿದ್ದಾರೆ ಎಂದು ಕಂಡುಹಿಡಿದಿದ್ದಾರೆ. ಅಲ್ಲದೇ ಶೇ. 54ರಷ್ಟು ಜನರು ತಮ್ಮ ಯಾವುದೇ ಮಾಹಿತಿಗಳು ಈಗಾಗಲೇ ಸೋರಿಕೆಯಾಗಿದೆಯೇ ಎಂಬುದನ್ನು ಪರಿಶೀಲಿಸುವುದನ್ನೂ ಸಹ ತಿಳಿದಿಲ್ಲ ಎಂದಿದ್ದಾರೆ.

ಸಾಮಾನ್ಯವಾಗಿ ಪಾಸ್​ವರ್ಡ್​ಗಳನ್ನು ದೃಢೀಕರಣಕ್ಕಾಗಿ ಬಳಸಲಾಗುತ್ತದೆ. ಆದರೆ ಅವು ಗೌಪ್ಯವಾಗಿದ್ದರೆ ಮಾತ್ರ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಎಚ್ಚರಿಸಿದ್ದಾರೆ.

ಕ್ಯಾಸ್ಪರ್ಸ್ಕಿ ವರದಿಯ ಪ್ರಕಾರ, ಇಂದು ಹೆಚ್ಚಿನ ಸಂಖ್ಯೆಯ ಅಪ್ಲಿಕೇಶನ್‌ಗಳು ಅಗತ್ಯವಿರುವ ಕಾರಣ, ಸಂಕೀರ್ಣ ಪಾಸ್‌ವರ್ಡ್‌ಗಳಿಗಾಗಿ ಭಿನ್ನವಾದ ಸಂಖ್ಯೆಯನ್ನು ನೀಡುವುದು ಹಾಗೂ ಅವುಗಳನ್ನು ನೆನಪಿನಲ್ಲಿಡುವುದು ಕಷ್ಟವಾಗಬಹುದು. ವಿಶೇಷವಾಗಿ ಬಳಕೆದಾರರು ತಮ್ಮ ಪಾಸ್‌ವರ್ಡ್‌ಗಳನ್ನು ನಿರಂತರವಾಗಿ ಬದಲಾಯಿಸಬೇಕಾದಾಗ ಈ ಸಮಸ್ಯೆ ಎದುರಾಗುತ್ತದೆ ಎನ್ನಲಾಗಿದೆ.

ಬಳಕೆದಾರರಿಗೆ ಸೃಜನಶೀಲತೆಯ ಈ ಸವಾಲಿನ ಜೊತೆಗೆ, ಪಾಸ್‌ವರ್ಡ್‌ಗಳನ್ನು ಸುರಕ್ಷಿತವಾಗಿ ಸಂಗ್ರಹಿಸುವುದು ಮತ್ತು ಮಾಹಿತಿಗಳು ಸೋರಿಕೆಯಾದಾಗ ಮುಂಬರುವ ಸಮಸ್ಯೆಗಳನ್ನು ಗಮನಿಸುವುದು ಹೆಚ್ಚು ಮಹತ್ವದ್ದಾಗಿದೆ ಎಂದು ವರದಿ ತಿಳಿಸಿದೆ.

ಸಂಶೋಧನೆಗಳ ಪ್ರಕಾರ, 55 ಪ್ರತಿಶತದಷ್ಟು ಬಳಕೆದಾರರು ತಮ್ಮ ಎಲ್ಲಾ ಪಾಸ್‌ವರ್ಡ್‌ಗಳನ್ನು ನೆನಪಿಸಿಕೊಳ್ಳುತ್ತಾರೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ಪಾಸ್‌ವರ್ಡ್ ಸಂಕೀರ್ಣತೆ ಮತ್ತು ಅನನ್ಯತೆಯಂತಹ ಭದ್ರತಾ ಅವಶ್ಯಕತೆಗಳನ್ನು ಪೂರೈಸಬೇಕಾದರೆ ಇದು ತುಂಬಾ ಕಷ್ಟಕರವಾಗಿರುತ್ತದೆ ಎಂದು ತಿಳಿದುಬಂದಿದೆ.

ಐದರಲ್ಲಿ ಒಬ್ಬರು (19 ಶೇ) ತಮ್ಮ ಕಂಪ್ಯೂಟರ್‌ನಲ್ಲಿ ಸಂಗ್ರಹವಾಗಿರುವ ಫೈಲ್ ಅಥವಾ ಡಾಕ್ಯುಮೆಂಟ್‌ನಲ್ಲಿ ಪಾಸ್​ವರ್ಡ್​ಗಳನ್ನು ಬರೆಯುತ್ತಾರೆ. ಆದರೆ, 18 ಪ್ರತಿಶತ ಜನರು ತಮ್ಮ ಕಂಪ್ಯೂಟರ್‌ಗಳು, ಸ್ಮಾರ್ಟ್‌ಫೋನ್‌ಗಳು ಅಥವಾ ಟ್ಯಾಬ್ಲೆಟ್‌ಗಳಲ್ಲಿನ ಬ್ರೌಸರ್‌ಗಳನ್ನು ತಮ್ಮ ಪಾಸ್‌ವರ್ಡ್‌ಗಳನ್ನು ಸಂಗ್ರಹಿಸಲು ಬಳಸುತ್ತಾರೆ ಎಂಬುದಾಗಿ ಸಂಶೋಧನೆಯಿಂದ ತಿಳಿದುಬಂದಿದೆ.

ABOUT THE AUTHOR

...view details