ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೆಷ ಸ್ಥಾನಮಾನ ನಿಡುವ ಸಂವಿಧಾನದ 370ನೇ ವಿಧಿಯನ್ನ ರದ್ದುಗೊಳಿಸಲಾಗಿದ್ದು, ಸೇನೆಗೆ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಭಾರತೀಯ ಸೇನೆ.. ವಾಯುಪಡೆಗೆ ಹೈ ಅಲರ್ಟ್: ಕಾಶ್ಮೀರಕ್ಕೆ 8 ಸಾವಿರ ಸೈನಿಕರು ದೌಡು - ಜಮ್ಮು ಮತ್ತು ಕಾಶ್ಮೀರ
370ನೇ ವಿಧಿ ರದ್ದುಗೊಳಿಸಿದ ನಂತರ ಮುಂಜಾಗ್ರತಾ ಕ್ರಮವಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ಹೆಚ್ಚಿನ ಸೇನಾಪಡೆಯನ್ನ ಕಳುಹಿಸಿಕೊಡಲಾಗಿದೆ.
ಕಾಶ್ಮೀರಕ್ಕೆ 8 ಸಾವಿರ ಸೈನಿಕರು ದೌಡು
370ನೇ ವಿಧಿಯನ್ನ ರದ್ದುಪಡಿಸಿದ ನಂತರ ಭಾರತೀಯ ಸೇನೆ ಮತ್ತು ಭಾರತೀಯ ವಾಯುಪಡೆಗೆ ಎಚ್ಚರಿಕೆಯಿಂದ ಇರುವಂತೆ ನಿರ್ದೇಶನ ನೀಡಲಾಗಿದೆ.
ಅಲ್ಲದೆ ಹೆಚ್ಚಿನ ಭದ್ರತೆಗಾಗಿ ಉತ್ತರ ಪ್ರದೇಶ, ಒಡಿಶಾ, ಅಸ್ಸೋಂ ಸೇರಿದಂತೆ ಇತರೆ ರಾಜ್ಯಗಳಲ್ಲಿದ್ದ 8 ಸಾವಿರ ಅರೆಸೇನಾ ಪಡೆಯನ್ನ ಕಾಶ್ಮೀರಕ್ಕೆ ಕಳುಹಿಸಿಕೊಡಲಾಗಿದೆ.