ಕರ್ನಾಟಕ

karnataka

ETV Bharat / bharat

ಧೋನಿ ಆಯ್ತು, ಈಗ ವಿಜಯ್ ಸೇತುಪತಿ ಪುತ್ರಿಗೂ ಅತ್ಯಾಚಾರ ಬೆದರಿಕೆ

ಸಾಮಾಜಿಕ ಜಾಲತಾಣದಲ್ಲಿ ವಿಜಯ್ ಸೇತುಪತಿ ಅವರ ಅಪ್ರಾಪ್ತ ಪುತ್ರಿಗೆ ಅತ್ಯಾಚಾರ ಬೆದರಿಕೆ ಬಂದಿದ್ದು, ಸಮಾಜದ ಕೊಳೆತ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ.

Vijay Sethupathi
ವಿಜಯ್ ಸೇತುಪತಿ

By

Published : Oct 20, 2020, 12:42 PM IST

ಮುಂಬೈ:ಸಾಕಷ್ಟು ವಿವಾದ ಸೃಷ್ಟಿಸಿದ್ದ ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಅವರ ಬಯೋಪಿಕ್ '800' ವಿಚಾರಕ್ಕೆ ಸಂಬಂಧಿಸಿದಂತೆತಮಿಳು ನಟ ವಿಜಯ್ ಸೇತುಪತಿ ಅವರ ಅಪ್ರಾಪ್ತ ಮಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿಅತ್ಯಾಚಾರ ಬೆದರಿಕೆ ಬಂದಿದೆ.

ಸೋಮವಾರವಷ್ಟೇ ಮುತ್ತಯ್ಯ ಮುರಳೀಧರನ್ ಮನವಿಗೆ ಸ್ಪಂದಿಸಿ ವಿಜಯ್​ ಸೇತುಪತಿ ಸಿನಿಮಾದಿಂದ ಹೊರಗುಳಿಯುವ ನಿರ್ಧಾರ ಪ್ರಕಟಿಸಿ ಟ್ವೀಟ್​ ಅನ್ನು ಪೋಸ್ಟ್ ಮಾಡಿದ್ದರು. ಸೋಮವಾರ ಸಂಜೆ @ItsRithikRajh ಎಂಬ ಹೆಸರಿನ ಟ್ವಿಟರ್ ಖಾತೆಯಿಂದ ಅತ್ಯಾಚಾರ ಬೆದರಿಕೆ ಬಂದಿದೆ.

ವಿಜಯ್ ಸೇತುಪತಿ ಹಾಗೂ ಮಗಳ ಚಿತ್ರವನ್ನು ಟ್ವಿಟರ್​​ನಲ್ಲಿ ಪೋಸ್ಟ್​ ಮಾಡಿ ತಮಿಳ್​​ ಈಲಂ (ಶ್ರೀಲಂಕಾದಲ್ಲಿ ಪ್ರತ್ಯೇಕ ತಮಿಳು ರಾಜ್ಯಕ್ಕೆ ಬೇಡಿಕೆ ಇಡುತ್ತಿರುವ ಸಮುದಾಯ) ಜನರ ಕಷ್ಟದ ಜೀವನವನ್ನು ವಿಜಯ್ ಸೇತುಪತಿಗೆ ಅರ್ಥ ಮಾಡಿಸಬೇಕಾದರೆ ಮಗಳ ಮೇಲೆ ಮೇಲೆ ಅತ್ಯಾಚಾರ ಮಾಡಬೇಕು ಎಂದು ಬರೆದುಕೊಂಡಿದ್ದಾನೆ.

ಇದನ್ನೂ ಓದಿ: 800 ಚಿತ್ರದಿಂದ ಹೊರಗುಳಿಯುವಂತೆ ಮನವಿ ಮಾಡಿದ ಸ್ಪಿನ್​ ಮಾಂತ್ರಿಕನಿಗೆ ಮಕ್ಕಳ್ ಸೆಲ್ವನ್ ಹೇಳಿದ್ದೇನು..?

ಈ ಟ್ವೀಟ್​​ಗೆ ನೆಟ್ಟಿಗರು ಹಾಗೂ ವಿವಿಧ ಸಮುದಾಯದ ಮುಖಂಡರು ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿದ್ದು, ಟ್ವೀಟ್ ಮಾಡಿದ ವ್ಯಕ್ತಿಯನ್ನು ಬಂಧಿಸಬೇಕೆಂದು ಆಗ್ರಹಿಸಿದ್ದಾರೆ. ಈ ಬೆನ್ನಲ್ಲೇ ಟ್ವೀಟ್ ಮಾಡಿದ್ದ ಅಕೌಂಟ್​ ನ ಡಿಲೀಟ್​ ಆಗಿದೆ.

ಕೆಲವು ದಿನಗಳ ಹಿಂದಷ್ಟೇ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಮಗಳ ಮೇಲೆಯೂ ಕೂಡಾ ಅತ್ಯಾಚಾರ ಬೆದರಿಕೆ ಸಾಮಾಜಿಕ ಜಾಲತಾಣದಲ್ಲಿ ಬಂದಿದ್ದು, ಗುಜರಾತ್​ನಲ್ಲಿ ವ್ಯಕ್ತಿಯನ್ನು ಬಂಧಿಸಲಾಗಿತ್ತು.

ABOUT THE AUTHOR

...view details