ಕರ್ನಾಟಕ

karnataka

ETV Bharat / bharat

ವಾಮಾಚಾರ ಕಲಿಯಲು 80 ವರ್ಷದ ವೃದ್ಧನನ್ನು ಜೀವಂತ ಹೂತು ಹಾಕಿದ ಕಿರಾತಕರು! - ವಾಮಾಚಾರ ಅಭ್ಯಾಸ ಮಾಡಲು ವೃದ್ದನ ಜೀವಂತ ಸಮಾಧಿ

ವಾಮಾಚಾರ ಕಲಿಯಲು ಸಂಬಂಧಿಗಳೇ ವೃದ್ಧನೋರ್ವನನ್ನು ಜೀವಂತ ಹೂತು ಹಾಕಿ ಕೊಂದಿರುವ ಅಮಾನವೀಯ ಘಟನೆ ಮೇಘಾಲಯದಲ್ಲಿ ನಡೆದಿದೆ.

old man buried alive for 'practising witchcraft
ಮೇಘಾಲಯದಲ್ಲಿ ವೃದ್ಧನನ್ನು ಜೀವಂತ ಹೂತು ಹಾಕಿದ ತಂಡ

By

Published : Oct 14, 2020, 10:50 AM IST

ಶಿಲಾಂಗ್ (ಮೇಘಾಲಯ): ವಾಮಾಚಾರ ಕಲಿಯಲು 80 ವರ್ಷದ ವೃದ್ಧನನ್ನು ಆತನ ಸಂಬಂಧಿ ಮತ್ತು ತಂಡ ಜೀವಂತ ಹೂತು ಹಾಕಿದ ಆಘಾತಕಾರಿ ಘಟನೆ ವೆಸ್ಟ್​ ಗಾರ್ಗೋ ಹಿಲ್ಸ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹೂತು ಹಾಕಲ್ಪಟ್ಟ ಮೃತ ವ್ಯಕ್ತಿಯನ್ನು ಮೋರಿಸ್ ಮಾರ್ಂಗರ್ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಟ್ಟಂತೆ ಪೊಲೀಸರು ಈಗಾಗಲೇ 8 ಜನರನ್ನು ಬಂಧಿಸಿದ್ದಾರೆ. ಐದು ಅಡಿ ಆಳದ ಗುಂಡಿಯಲ್ಲಿ ಹೂತು ಹಾಕಲ್ಪಟ್ಟ ವೃದ್ಧನ ಮೃತದೇಹವನ್ನು ಪೊಲೀಸರು ಹೊರ ತೆಗೆದಿದ್ದಾರೆ.

ಗ್ರಾಮಸ್ಥರು ನೀಡಿದ ಮಾಹಿತಿ ಪ್ರಕಾರ, ಮೃತ ವ್ಯಕ್ತಿಯ ಕೈ ಕಾಲುಗಳನ್ನು ಹಗ್ಗದಿಂದ ಕಟ್ಟಲಾಗಿತ್ತು ಮತ್ತು ಮುಖವನ್ನು ಬಟ್ಟೆಯಿಂದ ಮುಚ್ಚಲಾಗಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಲಾಹ್ಮೆನ್ ರಿನುಬಿ, ಇದು ಅಮಾನವೀಯ ಘಟನೆಯಾಗಿದೆ. ಅರೋಪಿಗಳ ವಿರುದ್ಧ ಕಾನೂನು ಪ್ರಕಾರ ಕ್ರಮಕೈಗೊಳ್ಳಲಾಗುತ್ತದೆ. ತನಿಖೆ ಮುಂದುವರೆದಿದೆ ಎಂದಿದ್ದಾರೆ.

ಘಟನೆಗೆ ಸಂಬಂಧಪಟ್ಟಂತೆ ಮುಲಿಫಾ ಮೌನರ್​ ಗ್ರಾಮದ ಮುಖ್ಯಸ್ಥನ ವಿರುದ್ಧ ನೊಂಗೊಸ್ಟೊಯಿನ್ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೋರಿಸ್​ನ್ನು ಮುಖ್ಯವಾದ ಕಾರ್ಯವೊಂದಿದೆ ಎಂದು ಹೇಳಿ ಸಂಬಂಧಿಗಳು ಕರೆದುಕೊಂಡು ಹೋಗಿದ್ದರು. ಹಾಗೇ ಹೋದ ಮೋರಿಸ್​, ಮತ್ತೆ ಮನೆಗೆ ಹಿಂದಿರುಗಿರಲಿಲ್ಲ. ಹೀಗಾಗಿ ಮನೆಯವರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಹುಡುಕಾಟ ನಡೆಸಿದಾಗ, ವಾಮಾಚಾರಕ್ಕಾಗಿ ಹೂತು ಹಾಕಿದ ವಿಷಯ ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ಮೃತನ ಸೋದರ ಸೊಸೆಯ ಕೈವಾಡದ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ. ಈ ಕುರಿತು ತನಿಖೆ ಮುಂದುವರೆದಿದೆ.

For All Latest Updates

ABOUT THE AUTHOR

...view details