ನವದೆಹಲಿ:ಶೇಕಡಾ 80 ರಷ್ಟು ಕೊರೊನಾ ರೋಗಿಗಳು ಲಕ್ಷಣ ರಹಿತ ಅಥವಾ ಸೌಮ್ಯ ಲಕ್ಷಣಗಳನ್ನು ಹೊಂದಿದ್ದವರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಎಚ್ಚರಿಸಿದೆ.
ವಿಶ್ವದಾದ್ಯಂತ ನಡೆಸಿದ ವಿಶ್ಲೇಷಣೆಯ ಪ್ರಕಾರ ಸುಮಾರು 80 ರಷ್ಟು ಕೊರೊನಾ ರೋಗಿಗಳು ಲಕ್ಷಣ ರಹಿತ ಅಥವಾ ಸೌಮ್ಯ ರೋಗ ಲಕ್ಷಣಗಳನ್ನು ಹೊಂದಿದ್ದವರು ಎಂದು ತೋರಿಸುತ್ತದೆ. ಸುಮಾರು 15 ರಷ್ಟು ಪ್ರಕರಣಗಳು ತೀವ್ರತರವಾದ ಪ್ರಕರಣಗಳಾಗಿದ್ದು, ಶೇಕಡಾ 5 ರಷ್ಟು ಮಂದಿ ಗಂಭೀರ ಪ್ರಕರಣಗಳಾಗಿ ಕಂಡುಬಂದಿವೆ ಎಂದು ಕೇಂದ್ರ ಆರೋಗ್ಯ ಮತ್ತು ಇಲಾಖೆ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ಹೇಳಿದ್ದಾರೆ.