ಕರ್ನಾಟಕ

karnataka

ETV Bharat / bharat

ಬಾಲಕಿ ಮೇಲೆ ಅತ್ಯಾಚಾರ: ಕಾಮುಕನ ಬಂಧನ - ಪಂಜಾಬ್​ ಲೆಟೆಸ್ಟ್ ನ್ಯೂಸ್

25 ವರ್ಷದ ಯುವಕ ಈಶ್ವರ್ ವಿಶ್ವಕರ್ಮ 8 ವರ್ಷದ ಬಾಲಕಿಗೆ 50 ರೂ. ಮತ್ತು ಚಾಕೋಲೇಟ್​​ ನೀಡುವುದಾಗಿ ಆಮಿಷವೊಡ್ಡಿ ಅತ್ಯಾಚಾರ ಎಸಗಿದ್ದಾನೆ.

8-yr-old-girl-raped-in-punjabs-ludhiana-accused-held
ಪಂಜಾಬ್: ಅಪ್ರಾಪ್ತೆ ಮೇಲೆ ಅತ್ಯಾಚಾರ, ಕಾಮುಕ ಪರಾರಿ!

By

Published : Oct 2, 2020, 8:39 AM IST

ಲುಧಿಯಾನ (ಪಂಜಾಬ್): ಓಲ್ಡ್ ಸಬ್ಜಿ ಮಂಡಿ ಪ್ರದೇಶದಲ್ಲಿ 25 ವರ್ಷದ ಯುವಕನೋರ್ವ ಎಂಟು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಸಹಾಯಕ ಪೊಲೀಸ್ ಆಯುಕ್ತ (ಉತ್ತರ) ಗುರ್ಬಿಂದರ್ ಸಿಂಗ್ ಮಾತನಾಡಿ, ಉತ್ತರ ಪ್ರದೇಶದ ಸಿದ್ಧಾರ್ಥ ನಗರ ಮೂಲದ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಮತ್ತು ದೂರುದಾರರು ಹತ್ತಿರದಲ್ಲೇ ವಾಸಿಸುತ್ತಿದ್ದರು. ನಿನ್ನೆ ಆರೋಪಿ ಈಶ್ವರ್ ವಿಶ್ವಕರ್ಮ 8 ವರ್ಷದ ಬಾಲಕಿಗೆ 50 ರೂ. ಮತ್ತು ಚಾಕೋಲೇಟ್​​ ನೀಡುವುದಾಗಿ ಆಮಿಷವೊಡ್ಡಿ ಅತ್ಯಾಚಾರ ಎಸಗಿದ್ದಾನೆ. ಕೊಣೆಯೊಂದರಲ್ಲಿ ಆರೋಪಿ ಬೆತ್ತಲಾಗಿದ್ದು, ಮಗಳಿಗೆ ರಕ್ತಸ್ರಾವವಾಗುತ್ತಿದ್ದನ್ನು ಬಾಲಕಿಯ ತಾಯಿ ಗಮನಿಸಿದ್ದಾಳೆ. ಈ ವೇಳೆ ಆರೋಪಿ ಆಕೆಯನ್ನು ತಳ್ಳಿ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ತಿಳಿಸಿದ್ದಾರೆ.

ಸದ್ಯ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 342 ಮತ್ತು 376 ಮತ್ತು ಪೋಕ್ಸೋ ಕಾಯ್ದೆ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಕೈಗೊಂಡಿದ್ದಾರೆ.

ABOUT THE AUTHOR

...view details