ಕರ್ನಾಟಕ

karnataka

ETV Bharat / bharat

ಬಾಲಕರಿಂದ ಬಾಲಕನ ಮೇಲೆ ಅಸಭ್ಯ ವರ್ತನೆ, ಕೊಲೆ ಬೆದರಿಕೆ : ಇಬ್ಬರ ವಿರುದ್ಧ ಪೋಕ್ಸೋ ಕೇಸ್​ - ಬಾಲಕನೊಂದಿಗೆ ಅಸಭ್ಯ ವರ್ತನೆ

ಅಪ್ರಾಪ್ತ ವಯಸ್ಸಿನ ಬಾಲಕನೊಂದಿಗೆ ಅದೇ ವಯಸ್ಸಿನ ಬಾಲಕರಿಬ್ಬರು ಅಸಭ್ಯವಾಗಿ ವರ್ತಿಸಿ ಕೊಲೆ ಬೆದರಿಕೆ ಹಾಕಿರುವ ಘಟನೆಯೊಂದು ರಾಜಸ್ಥಾನದ ಚುರು ಜಿಲ್ಲೆಯಲ್ಲಿ ನಡೆದಿದೆ.

child misdeed
ಬಾಲಕರಿಬ್ಬರ ವಿರುದ್ಧ ಪೋಕ್ಸೋ ಕೇಸ್​

By

Published : Jul 9, 2020, 8:03 AM IST

ಚುರು ( ರಾಜಸ್ಥಾನ) :ಎಂಟು ವರ್ಷದ ಬಾಲಕನೊಂದಿಗೆ ಅಪ್ರಾಪ್ತ ಬಾಲಕರಿಬ್ಬರು ಅಸಭ್ಯವಾಗಿ ವರ್ತಿಸಿದ ಘಟನೆ ಜಿಲ್ಲೆಯ ಕೊಟ್ವಾಲಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಜುಲೈ 3 ರಂದು 8 ವರ್ಷದ ಬಾಕಲನೊಬ್ಬ ಮನೆಯಿಂದ ಕಾಣೆಯಾಗಿ ಬಳಿಕ ಪತ್ತೆಯಾಗಿದ್ದ. ಈ ವೇಳೆ, ಕುಟುಂಬಸ್ಥರು ಬಾಲಕನನ್ನು ವಿಚಾರಿಸಿದಾಗ ಸ್ಥಳೀಯ ಬಾಲಕರಿಬ್ಬರು ತನ್ನನ್ನು ಕರೆದುಕೊಂಡು ಹೋಗಿ ಅಸಭ್ಯವಾಗಿ ವರ್ತಿಸಿದ್ದಲ್ಲದೇ ವಿಷಯವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಹೇಳಿದ್ದ.

ಈ ಸಂಬಂಧ ದೂರು ನೀಡಲು ಕುಟುಂಬಸ್ಥರು ಕೊಟ್ವಾಲಿ ಪೊಲೀಸ್​ ಠಾಣೆಗೆ ತೆರಳಿದ್ದರು. ಆದರೆ, ಪೊಲೀಸ್ ಠಾಣೆಯ ಎಸ್​ಐ ದೂರು ಸ್ವೀಕರಿಸಲು ನಿರಾಕರಿಸಿ ಬಾಲಕನ ಕುಟುಂಬಸ್ಥರು ಮನೆಗೆ ಕಳುಹಿಸಿದ್ದರು. ಬಳಿಕ ಅಲ್ಪ ಸಮಯದ ನಂತರ ಸಂತ್ರಸ್ತ ಬಾಲಕನ ಮನೆಗೆ ಸ್ವತಃ ಆಗಮಿಸಿದ ಎಸ್​ಐ ಕುಟುಂಬದೊಂದಿಗೆ ಮಾತುಕತೆ ನಡೆಸಿ ದೂರು ನೀಡದಂತೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಆದರೆ, ಎಸ್​​ಐ ಬೆದರಿಕೆಗೆ ಬಗ್ಗದ ಬಾಲಕನ ಕುಟುಂಬಸ್ಥರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯದ ಮಧ್ಯ ಪ್ರವೇಶದ ಬಳಿಕ ದುಷ್ಕೃತ್ಯವೆಸಗಿದ ಬಾಲಕರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಸಂತ್ರಸ್ತ ಬಾಲಕನನ್ನು ಸರ್ಕಾರಿ ಭಾರ್ತಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ABOUT THE AUTHOR

...view details