ವಿಶಾಖಪಟ್ಟಣಂ: ಆಂಧ್ರಪ್ರದೇಶದ ವಿಶಾಖಪಟ್ಟಣಂನ ಪಾಡೇರು ತಾಲೂಕಿನಲ್ಲಿ ಹೊಟ್ಟೆ ಪಾಡಿಗಾಗಿ ಎಂಟು ತಿಂಗಳ ಗರ್ಭಿಣಿಯೊಬ್ಬರು ತಲೆ ಮೇಲೆ 15 ಕೆಜಿ ಭಾರವನ್ನು ಹೊತ್ತುಕೊಂಡು ಐದು ಕಿ.ಮೀ ದೂರ ಕ್ರಮಿಸಿ ಬಂದ ಹಣದಲ್ಲಿ ಜೀವನ ನಡೆಸುತ್ತಿದ್ದಾರೆ.
ಪಾಡೇರುದಿಂದ 5 ಕಿ.ಮೀ ದೂರದಲ್ಲಿರುವ ಬೆಟ್ಟದ ಮೇಲೆ ಅರುಣ ಎಂಬ ತುಂಬ ಗರ್ಭಿಣಿ ವಾಸಿಸುತ್ತಿದ್ದಾರೆ. ಮನೆ ಮತ್ತು ಹೊಲ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇಷ್ಟೇ ಅಲ್ಲದೇ ಅವರು ಪ್ರತಿನಿತ್ಯ 15 ಕೆ.ಜಿ ಸೆವಂತಿ ಹೂವನ್ನು ತಲೆ ಮೇಲೆ ಹೊತ್ತುಕೊಂಡು ಬೆಟ್ಟ- ಗುಡ್ಡದ ಕಡಿದಾದ ದಾರಿಯಲ್ಲಿ ಬರಿಸಿಂಗಿನಿಂದ ಪಾಡೇರುವರೆಗೂ ಕ್ರಮಿಸುತ್ತಾರೆ.
ಕುಟುಂಬಕ್ಕೆ ಆಸರೆಯಾದ ಗರ್ಭಿಣಿ! ಅರುಣ ಹೇಳಿದ್ದೇನು?
ಈಗಾಗಲೇ ನಿಮಗೆ ಮೂರು ಸಂತಾನ. ಮುಂದಿನ ತಿಂಗಳಲ್ಲಿ ನಾಲ್ಕನೇ ಮಗುವಿಗೆ ಜನ್ಮನೀಡ್ತಿದ್ದೀರಿ ಅಲ್ವಾ... ಪ್ರತಿಕೂಲ ಪರಿಸ್ಥಿತಿಯಲ್ಲಿ ಏಕೆ ಭಾರವನ್ನು ಹೋರುತ್ತೀರಾ ಎಂದು ವರದಿಗಾರರು ಕೇಳಿದಾಗ.. ‘ನಮ್ಮ ಕೆಲಸ ನಾವು ಮಾಡಿಕೊಂಡ್ರೆ ಸುಲಭವಾಗಿ ಹೆರಿಗೆ ಆಗುತ್ತದೆ. ಈ ಹಿಂದೆ ಹೆರಿಗೆ ಸಮಯದಲ್ಲಿ ಯಾವುದೇ ರೀತಿಯ ಶಸ್ತ್ರ ಚಿಕಿತ್ಸೆ ಮಾಡುತ್ತಿರಲಿಲ್ಲ ಎಂದು ಪ್ರತ್ಯುತ್ತರ ಕೊಟ್ಟರು.
ತುಂಬು ಗರ್ಭಿಣಿಯಾಗಿದ್ರೂ ಸಹ ಅರುಣಾ ತನ್ನ ಕುಟುಂಬಕ್ಕೆ ಆಸರೆಯಾಗಿ ನಿಂತಿದ್ದಾರೆ. ಹೀಗಾಗಿ ಸ್ಥಳೀಯರು ಅರುಣನನ್ನು ಮೆಚ್ಚುತ್ತಿದ್ದಾರೆ. ನಮ್ಮ ಗ್ರಾಮಕ್ಕೆ ಕನಿಷ್ಠ ಆಟೋ ವ್ಯವಸ್ಥೆಯೂ ಇಲ್ಲ. ರಹಾದಾರಿ ಸೌಕರ್ಯ ವ್ಯವ್ಯಸ್ಥೆ ಕಲ್ಪಿಸಿದ್ರೆ ಗ್ರಾಮಸ್ಥರಿಗೆ ಪ್ರಯೋಜನವಾಗುತ್ತೆ ಎಂದು ಗ್ರಾಮಸ್ಥರ ಮಾತಾಗಿದೆ.