ಗಾಂಧಿನಗರ (ಗುಜರಾತ್):ಸಬರಮತಿ ಕೇಂದ್ರ ಕಾರಾಗೃಹದಲ್ಲಿ ಹೊರಗಿನವರ ಸಂಪರ್ಕ ಇಲ್ಲದಿದ್ದರೂ ಎಂಟು ಮಂದಿ ಕೈದಿಗಳಲ್ಲಿ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ.
ಹೊರ ಜಗತ್ತಿನ ಸಂಪರ್ಕವೇ ಇಲ್ಲ: ಆದ್ರೂ ಜೈಲಲ್ಲಿದ್ದ 8 ಮಂದಿ ಕೈದಿಗಳಿಗೆ ಕೊರೊನಾ! - ಕೈದಿಗಳಲ್ಲಿ ಕೊರೊನಾ ಪಾಸಿಟಿವ್
ಹೊರಗಿನವರ ಸಂಪರ್ಕ ಇಲ್ಲದಿದ್ದರೂ ಎಂಟು ಮಂದಿ ಕೈದಿಗಳಲ್ಲಿ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ. ವೈರಸ್ ದೃಢಪಟ್ಟ ಯಾವೊಬ್ಬ ಕೈದಿಯಲ್ಲೂ ಕೊರೊನಾ ಲಕ್ಷಣಗಳಿರಲಿಲ್ಲ.
jail
2019ರ ಕೊಲೆ ಆರೋಪಿ ಮನುಭಾಯ್ ದೇಸಾಯಿ ಎಂಬಾತನಿಗೆ ಗುಜರಾತ್ ಹೈಕೋರ್ಟ್‌ನಲ್ಲಿ ಜಾಮೀನು ಸಿಕ್ಕಿತ್ತು. ಮನೆಗೆ ಕಳುಹಿಸುವ ಮೊದಲು ಪರೀಕ್ಷೆಗೆ ಒಳಪಡಿಸಿದಾಗ ಮನುಭಾಯ್ ಸೇರಿದಂತೆ 8 ಕೈದಿಗಳಲ್ಲಿ ಕೊರೊನಾ ಪತ್ತೆಯಾಗಿದೆ.
ಹೊರಗಿನ ಪ್ರಪಂಚದೊಂದಿಗೆ ಯಾವುದೇ ಸಂಪರ್ಕವಿಲ್ಲದ ಕೈದಿಗಳಿಗೆ ಜೈಲಿನೊಳಗೆ ಕೊರೊನಾ ಸೋಂಕು ತಗುಲಿರುವ ಮೊದಲ ನಿದರ್ಶನ ಇದಾಗಿದೆ. ಕೋವಿಡ್ ದೃಢಪಟ್ಟ ಯಾವೊಬ್ಬ ಕೈದಿಯಲ್ಲೂ ಅದರ ಲಕ್ಷಣಗಳು ಕಂಡು ಬಂದಿಲ್ಲವಂತೆ. ಇದೀಗ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.