ಕರ್ನಾಟಕ

karnataka

ETV Bharat / bharat

ವೀಸಾ ಉಲ್ಲಂಘನೆ ಆರೋಪ.. ತಮಿಳುನಾಡಿನಲ್ಲಿ 8 ಇಂಡೋನೇಷ್ಯಾ ಪ್ರಜೆಗಳ ಬಂಧನ.. - ತಮಿಳುನಾಡುನಲ್ಲಿ 8 ಇಂಡೋನೇಷಿಯ ಪ್ರಜೆಗಳ ಬಂಧನ

ಸಿಆರ್‌ಪಿಸಿಯ ಸೆಕ್ಷನ್ 144 ಉಲ್ಲಂಘಿಸಿದ್ದಕ್ಕಾಗಿ ವಿದೇಶಿಗರನ್ನು ಬಂಧಿಸಲಾಗಿದೆ. ರಾಜ್ಯದಲ್ಲಿ ಕೊರೊನಾ ವೈರಸ್ ಹರಡುವುದನ್ನು ತಡೆಯಲು ನಡೆಯುತ್ತಿರುವ ಲಾಕ್‌ಡೌನ್‌ನ ತಮಿಳುನಾಡಿನಲ್ಲಿ ವಿಧಿಸಲಾಗಿದೆ.

8 Indonesians arrested for visa violations in TN
ತಮಿಳುನಾಡುನಲ್ಲಿ 8 ಇಂಡೋನೇಷಿಯ ಪ್ರಜೆಗಳ ಬಂಧನ

By

Published : Apr 10, 2020, 11:34 AM IST

ರಾಮನಾಥಪುರಂ(ತಮಿಳುನಾಡು) :ದೇಶದ ವಿವಿಧ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ ಎಂಟು ಇಂಡೋನೇಷ್ಯಾ ಪ್ರಜೆಗಳನ್ನು ವೀಸಾ ಉಲ್ಲಂಘನೆ ಆರೋಪದಡಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧನಕ್ಕೊಳಗಾದ ಇಂಡೋನೇಷ್ಯಾದ ಪ್ರಜೆಗಳನ್ನು ನಿರ್ಬಂಧಿಸಲಾಗಿದೆ. ಅವರ ರಕ್ತದ ಮಾದರಿಗಳನ್ನು ಪರೀಕ್ಷೆ ಕಳುಹಿಸಲಾಗಿದೆ. ಅವರ ವಾಸ್ತವ್ಯಕ್ಕೆ ಅನುಕೂಲ ಮಾಡಿಕೊಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೆಹಲಿಯಲ್ಲಿ ನಡೆದ ವಿವಿಧ ಧಾರ್ಮಿಕ ಸಭೆಗಳಲ್ಲಿ ಭಾಗವಹಿಸಿದ್ದ ಇವರೆಲ್ಲಮಾರ್ಚ್ 22 ರಂದು ಆಗಮಿಸಿದ್ದರು. ಸಿಆರ್‌ಪಿಸಿಯ ಸೆಕ್ಷನ್ 144 ಉಲ್ಲಂಘಿಸಿದ್ದಕ್ಕಾಗಿ ವಿದೇಶಿಗರನ್ನು ಬಂಧಿಸಲಾಗಿದೆ. ರಾಜ್ಯದಲ್ಲಿ ಕೊರೊನಾ ವೈರಸ್ ಹರಡುವುದನ್ನು ತಡೆಯಲು ನಡೆಯುತ್ತಿರುವ ಲಾಕ್‌ಡೌನ್‌ನ ತಮಿಳುನಾಡಿನಲ್ಲಿ ವಿಧಿಸಲಾಗಿದೆ.

ಕೆನಿಕರೈ ಗ್ರಾಮ ಆಡಳಿತಾಧಿಕಾರಿ (ವಿಎಒ) ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು, ವಿದೇಶಿಯರನ್ನು ಬಂಧಿಸಿ ಪಾಸ್‌ಪೋರ್ಟ್ ಕಾಯ್ದೆ ಮತ್ತು ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ಇತರೆ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ ಎಂದು ಗ್ರಾಮ ಆಡಳಿತಾಧಿಕಾರಿ ಹೇಳಿದರು. ಏಪ್ರಿಲ್ 23ರವರೆಗೆ ವಿದೇಶಗರನ್ನ ಬಂಧನಕ್ಕೊಳಪಡಿಸಲಾಗಿದೆ. ಈಗ ಇವರನ್ನೆಲ್ಲ ಪರಮಕುಡಿ ಜೈಲಿನಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ.

ABOUT THE AUTHOR

...view details