ಕೋಲ್ಕತ್ತಾ:ಕಳೆದ ಎರಡು ದಶಕಗಳಲ್ಲಿ ಅತ್ಯಂತ ಪ್ರಬಲ ಚಂಡಮಾರುತ ಎಂದೇ ಪರಿಗಣಿಸಲಾಗಿರುವ ಫಣಿ ಚಂಡಮಾರುತ ಒಡಿಶಾದಲ್ಲಿ ಭಾರಿ ಅವಾಂತರ ಸೃಷ್ಠಿಸಿದ್ದು, ಇಂದು ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಿದೆ.
ಫಣಿ ಚಂಡಮಾರುತ ಇಂದು ಬೆಳಗ್ಗೆ ಖರಗ್ಪುರಕ್ಕೆ ಅಪ್ಪಳಿಸುವ ಮೂಲಕ ಪಶ್ಚಿಮ ಬಂಗಾಳಕ್ಕೆ ಎಂಟ್ರಿ ಕೊಟ್ಟಿದೆ. ಈಶಾನ್ಯ ದಿಕ್ಕಿನಲ್ಲಿ ಸುಮಾರು 90 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಭಾರಿ ಹಾನಿ ಉಂಟು ಮಾಡಿದೆ.
ಇದಕ್ಕೂ ಮೊದಲು ಒಡಿಶಾದಲ್ಲಿ ಭಾರಿ ಹಾನಿ ಉಂಟು ಮಾಡಿರುವ ಫಣಿ ಚಂಡಮಾರುತ ಇಲ್ಲಿಯವರೆಗೆ 8 ಜನರನ್ನ ಬಲಿ ಪಡೆದುಕೊಂಡಿದೆ. ಪುರಿ ಜಗನ್ನಾಥ ದೇವಾಲಯದ ಸುತ್ತ ಮುತ್ತಲ ಪ್ರದೇಶಗಳು ಮುಳುಗಡೆಯಾಗಿವೆ. ಇಲ್ಲಿಯವರೆಗೆ 600 ಗರ್ಭಿಣಿಯರನ್ನ ಸೇರಿದಂತೆ 11 ಲಕ್ಷ ಜನರನ್ನ ಒಡಿಶಾ ಸರ್ಕಾರ ಸ್ಥಳಾಂತರ ಮಾಡಿದೆ.
ಫಣಿ ಎಫೆಕ್ಟ್ನಿಂದ ಪಶ್ಚಿಮ ಬಂಗಾಳದಲ್ಲೂ ಭಾರಿ ಮಳೆ ಸುರಿಯುತ್ತಿದ್ದು ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಅಲ್ಲದೆ ಕೋಲ್ಕತ್ತಾದಲ್ಲಿ ವಿಮಾನ ಹಾರಾಟ ಸ್ಥಗಿತಗೊಂಡಿದೆ. ಮುಂದಿನ 48 ಗಂಟೆಗಳ ಕಾಲ ನಡೆಯ ಬೇಕಿದ್ದ ವಿವಿಧ ಚುನಾವಣಾ ರ‍್ಯಾಲಿಗಳನ್ನ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ರದ್ದುಗೊಳಿಸಿದ್ದಾರೆ.