ಜಮ್ಶೆಡ್ಪುರ (ಜಾರ್ಖಂಡ್): ಮೊಬೈಲ್ ಟವರ್ ಅಳವಡಿಸುವ ಮೂಲಕ ಲಕ್ಷಾಂತರ ರೂಪಾಯಿ ಸಂಪಾದಿಸುವ ಆಮಿಷದೊಂದಿಗೆ, ಬಿಸ್ಟುಪುರ ಪೊಲೀಸ್ ಠಾಣಾ ಪ್ರದೇಶದಲ್ಲಿ ವಾಸಿಸುತ್ತಿರುವ ಮಹಿಳೆಯೊಬ್ಬರಿಗೆ ಎಪ್ಪತ್ತೈದು ಲಕ್ಷ ರೂಪಾಯಿ ಮೋಸ ಮಾಡಲಾಗಿದೆ.
ಈ ಪ್ರಕರಣದಲ್ಲಿ ಸಂತ್ರಸ್ತೆ ಬಿಸ್ಟುಪುರ ಸೈಬರ್ ಪೊಲೀಸ್ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ, ಎಟಿಎಂ ಕಾರ್ಡ್ ಹೊಂದಿರುವವರಿಗೆ ಕರೆ ಮಾಡಿ, ಹಣ ತಮ್ಮ ಬ್ಯಾಂಕ್ ಖಾತೆಗಳಿಂದ ತೆರವುಗೊಳಿಸಲು ಪಾಸ್‌ವರ್ಡ್‌ಗಳನ್ನು ಪಡೆದು ಮೋಸದಿಂದ ಹಣ ಪಡೆಯುತ್ತಿರುವ ಹಲವಾರು ಪ್ರಕರಣಗಳು ನಡೆದಿವೆ.
ಈ ಕುರಿತು ನಿರಂತರ ಮಾಹಿತಿ ನೀಡಲಾಗುತ್ತಿದ್ದರೂ ಜನರು ವಂಚನೆಗೆ ಬಲಿಯಾಗುತ್ತಿದ್ದಾರೆ. ಇದೇ ರೀತಿಯ ಪ್ರಕರಣ ಜಮ್ಶೆಡ್ಪುರದಲ್ಲಿ ಕಂಡುಬಂದಿದೆ. ವಿಸ್ಟಾಫೋನ್ ಮೊಬೈಲ್ ಟವರ್ ಸ್ಥಾಪಿಸುವ ಹೆಸರಿನಲ್ಲಿ ಬಿಸ್ಟುಪುರದಲ್ಲಿರುವ ಮಹಿಳೆಯೊಬ್ಬಳು ಎಪ್ಪತ್ತೈದು ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾಳೆ.
ಆರೋಪಿಗಳು ಮೊಬೈಲ್ ಟವರ್ ಸ್ಥಾಪಿಸುವ ಕಂಪನಿಯ ನಿರ್ವಹಣೆ ಮತ್ತು ಕೆಲಸದ ಬಗ್ಗೆ ಮಾಹಿತಿ ಪಡೆದು, ನಂತರ ನಕಲಿ ಒಪ್ಪಂದವನ್ನು ಸಿದ್ಧಪಡಿಸಿದ್ದಾರೆ. ಬಳಿಕ ಮಹಿಳೆಗೆ ಕರೆ ಮಾಡಿ, ಟವರ್ ಕಾಮಗಾರಿಗೆ ಒಂದು ಬಾರಿ ಮೂವತ್ತು ಲಕ್ಷ ನೀಡಿದರೆ, ನಲವತ್ತು ಲಕ್ಷ ಪಾವತಿಸಲಾಗುವುದು ಎಂದು ಆರೋಪಿಗಳು ತಿಳಿಸಿದ್ದಾರೆ. ಬಳಿಕ ತಿಂಗಳಿಗೆ ಹದಿನೆಂಟು ಸಾವಿರ ರೂಪಾಯಿಗಳನ್ನು ಕಂತುಗಳಲ್ಲಿ ಪಾವತಿಸಲಾಗುವುದು ಎಂದು ಹೇಳಿದ್ದಾರೆ. ಹೀಗೆ ಮಹಿಳೆಯಿಂದ ಒಟ್ಟು 75 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ್ದಾರೆ.