- ಭಾರತ - ಬಾಂಗ್ಲಾ ಗಡಿಯಲ್ಲಿ ಸ್ವಾತಂತ್ರ್ಯ ದಿನದ ಸಂಭ್ರಮ
- ಬಾಂಗ್ಲಾದೇಶದ ಸೈನಿಕರಿಗೆ ಸಿಹಿ ವಿತರಿಸಿದ ಭಾರತೀಯ ಯೋಧರು
ದೇಶದೆಲ್ಲೆಡೆ ಸ್ವಾತಂತ್ರ್ಯ ಸಂಭ್ರಮ...
13:46 August 15
ಗಡಿಯಲ್ಲಿ ಸಂಭ್ರಮ
13:45 August 15
ಕೇಂದ್ರ ಸಚಿವರಿಂದ ಧ್ವಜಾರೋಹಣ
- ದೆಹಲಿಯಲ್ಲಿ ಕೇಂದ್ರ ಸಚಿವರ ಸ್ವಾತಂತ್ರ್ಯ ದಿನಾಚರಣೆ
- ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಧ್ವಜಾರೋಹಣ ನೆರವೇರಿಸಿದ ಡಾ.ಹರ್ಷವರ್ಧನ್, ಜಿತೇಂದ್ರ ಸಿಂಗ್, ನಿರ್ಮಲಾ ಸೀತಾರಾಮನ್ ಮತ್ತು ಪ್ರಕಾಶ್ ಜಾವಡೇಕರ್
12:07 August 15
ಐಟಿಬಿಪಿ ಸಿಬ್ಬಂದಿ- ಕೋವಿಡ್ ರೋಗಿಗಳಿಂದ ಸ್ವಾತಂತ್ರ್ಯ ದಿನಾಚರಣೆ
- ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಸಿಬ್ಬಂದಿ ಮತ್ತು ಕೊರೊನಾ ರೋಗಿಗಳಿಂದ ಸ್ವಾತಂತ್ರ್ಯ ದಿನಾಚರಣೆ
- ದೆಹಲಿಯ ಸರ್ದಾರ್ ಪಟೇಲ್ ಕೋವಿಡ್ ಕೇರ್ ಸೆಂಟರ್ ಮತ್ತು ಆಸ್ಪತ್ರೆಯಲ್ಲಿ ಆಚರಣೆ
11:56 August 15
ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ನಮನ
- ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ನಮಿಸಿದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್
- ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್, ಸೇನಾ ಮುಖ್ಯಸ್ಥ ಎಂ ಎಂ ನರವನೆ, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್, ವಾಯುಪಡೆಯ ಮುಖ್ಯಸ್ಥ ಆರ್.ಕೆ.ಎಸ್ ಭದೌರಿಯಾ ಉಪಸ್ಥಿತಿ
11:45 August 15
ಸ್ವಾತಂತ್ರ್ಯ ದಿನಾಚರಣೆಯ ಶುಭ ಕೋರಿದ ನೇಪಾಳದ ಪ್ರಧಾನಿ
- ಈ ಸಂತೋಷದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಭಾರತ ಸರ್ಕಾರ ಮತ್ತು ಭಾರತದ ಜನರಿಗೆ ಅಭಿನಂದನೆ ಮತ್ತು ಶುಭಾಶಯಗಳು
- ಭಾರತದ ಜನರ ಹೆಚ್ಚಿನ ಪ್ರಗತಿ ಮತ್ತು ಸಮೃದ್ಧಿಗೆ ಶುಭಾಶಯಗಳು
- 74ನೇ ಸ್ವಾತಂತ್ರ್ಯ ದಿನಾಚರಣೆಯ ಶುಭ ಕೋರಿದ ನೇಪಾಳದ ಪ್ರಧಾನಿ ಕೆ.ಪಿ.ಶರ್ಮಾ ಓಲಿ
10:36 August 15
ತಮ್ಮ ನಿವಾಸಗಳಲ್ಲಿ ಧ್ವಜಾರೋಹಣ ಮಾಡಿದ ಶಾ, ಕೇಜ್ರಿವಾಲ್
- ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ರಿಂದ ಧ್ವಜಾರೋಹಣ
- ದೆಹಲಿಯ ತಮ್ಮ ನಿವಾಸಗಳಲ್ಲಿ ಧ್ವಜಾರೋಹಣ ಮಾಡಿದ ಶಾ, ಕೇಜ್ರಿವಾಲ್
09:02 August 15
ನೇಪಾಳ, ಚೀನಾ ಹಾಗೂ ಪಾಕಿಸ್ತಾನಕ್ಕೆ ಮೋದಿ ತಿರುಗೇಟು
- ಗಡಿಯಲ್ಲಿ ನೆರೆ ರಾಷ್ಟ್ರಗಳ ಕ್ಯಾತೆ ವಿಚಾರ
- ಗಡಿ ನಿಯಂತ್ರಣಾ ರೇಖೆಯಿಂದ ವಾಸ್ತವಿಕ ಗಡಿ ರೇಖೆಯ ವರೆಗೂ ನಮ್ಮ ದೇಶದ ಸಾರ್ವಭೌಮತ್ವದ ಮೇಲೆ ಕಣ್ಣಿಟ್ಟವರಿಗೆ,
- ನಮ್ಮ ಯೋಧರು ತಕ್ಕ ಉತ್ತರ ನೀಡಿದ್ದಾರೆ
- ನೇಪಾಳ, ಚೀನಾ ಹಾಗೂ ಪಾಕಿಸ್ತಾನಕ್ಕೆ ಮೋದಿ ತಿರುಗೇಟು
08:51 August 15
ಜಮ್ಮು-ಕಾಶ್ಮೀರಲ್ಲಿ ಚುನಾವಣೆ ನಡೆಸಲು ಸಿದ್ಧತೆ
- ಒಂದು ವರ್ಷದಲ್ಲಿ ಜಮ್ಮು-ಕಾಶ್ಮೀರಲ್ಲಿ ಭಾರಿ ಬದಲಾವಣೆಯಾಗಿದೆ
- ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿ ಅದರ ಬೇಡಿಕೆ ಈಡೇರಿಸಿದ್ದೇವೆ
- ಜಮ್ಮು-ಕಾಶ್ಮೀರಲ್ಲಿ ಚುನಾವಣೆ ನಡೆಸಲು ಸಿದ್ಧತೆ ನಡೆಸಿದ್ದೇವೆ
- ಮೋದಿ ಹೇಳಿಕೆ
08:49 August 15
ನ್ಯಾಷನಲ್ ಹೆಲ್ತ್ ಡಿಜಿಟಲ್ ಮಿಷನ್ ಘೋಷಣೆ
- ಇಂದಿನಿಂದ ಪ್ರತಿಯೊಬ್ಬ ಭಾರತೀಯರಿಗೆ ಹೆಲ್ತ್ ಐಡಿ ನೀಡಲಾಗುತ್ತದೆ
- ನಿಮ್ಮ ಆರೋಗ್ಯದ ಸಂಪೂರ್ಣ ಮಾಹಿತಿ ಅದರಲ್ಲಿರುತ್ತದೆ
- ಕೆಂಪು ಕೋಟೆಯಲ್ಲಿ ಮೋದಿಯಿಂದ ನ್ಯಾಷನಲ್ ಹೆಲ್ತ್ ಡಿಜಿಟಲ್ ಮಿಷನ್ ಘೋಷಣೆ
08:47 August 15
ಹೊಸ ಸೈಬರ್ ನೀತಿ
- ಸೈಬರ್ ಸೆಕ್ಯುರಿಟಿಗಾಗಿ 'ಹೊಸ ಸೈಬರ್ ನೀತಿ' ಜಾರಿಗೆ ತರಲಿದ್ದೇವೆ
- ಜನೌಷಧಿ ಕೇಂದ್ರಗಳಲ್ಲಿ 5 ಸಾವಿರ ಕೋಟಿ ಸ್ಯಾನಿಟೈಸರ್ ಪ್ಯಾಡ್ ವಿತರಿಸಿದ್ದೇವೆ
- ಬಡ ಕುಟುಂಬಗಳ ಮಹಿಳೆಯರಿಗಾಗಿ ಪ್ಯಾಡ್ ವಿತರಿಸಿದ್ದೇವೆ
- ಒಂದು ವರ್ಷದಲ್ಲಿ ಜಮ್ಮು-ಕಾಶ್ಮೀರಲ್ಲಿ ಭಾರಿ ಬದಲಾವಣೆಯಾಗಿದೆ
- ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿ ಅದರ ಬೇಡಿಕೆ ಈಡೇರಿಸಿದ್ದೇವೆ
08:38 August 15
ಶೀಘ್ರದಲ್ಲೇ ಕೊರೊನಾ ವ್ಯಾಕ್ಸಿನ್ ಉತ್ಪಾದಿಸಲಿದ್ದೇವೆ
- ಅತ್ಯಂತ ಶೀಘ್ರದಲ್ಲೇ ಭಾರತದಲ್ಲಿ ಕೊರೊನಾ ವ್ಯಾಕ್ಸಿನ್ ಉತ್ಪಾದಿಸಲಿದ್ದೇವೆ
- ದೇಶದ ವಿಜ್ಞಾನಿಗಳು ಈ ಕಾರ್ಯದಲ್ಲಿ ನಿರತರಾಗಿದ್ದಾರೆ
- ಭಾರತದಲ್ಲಿ ಮೂರು ಲಸಿಕೆಗಳನ್ನು ಸಿದ್ಧಪಡಿಸಲಾಗುತ್ತಿದೆ
- ವಿಜ್ಞಾನಿಗಳು ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆಯೇ ಬೃಹತ್ ಪ್ರಮಾಣದಲ್ಲಿ ಲಸಿಕೆ ಉತ್ಪಾದಿಸಲಿದ್ದೇವೆ
08:17 August 15
'ವೋಕಲ್ ಫಾರ್ ಲೋಕಲ್' ಕುರಿತು ಮೋದಿ ಮಾತು
- ಕೆಲ ತಿಂಗಳ ಹಿಂದೆ ನಾವು ಎನ್-95 ಮಾಸ್ಕ್ಗಳನ್ನ, ಪಿಪಿಇ ಕಿಟ್ಗಳನ್ನ ಆಮದು ಮಾಡಿಕೊಳ್ಳುತ್ತಿದ್ದೆವು
- ಆದರೆ ಈಗ ನಮ್ಮ ಅಗತ್ಯತೆಗಳನ್ನು ನಾವೇ ಪೂರೈಸಿಕೊಳ್ಳುತ್ತಿರುವುದಲ್ಲದೇ ಇತರ ದೇಶಗಳಿಗೂ ನೆರವಾಗುತ್ತಿದ್ದೇವೆ
- ನಮ್ಮ ಸ್ಥಳೀಯ ಉತ್ಪನ್ನಗಳನ್ನು ನಾವು ಬಳಸಬೇಕು, ಪ್ರಶಂಸಿಸಬೇಕು
- 'ವೋಕಲ್ ಫಾರ್ ಲೋಕಲ್' ಕುರಿತು ಮೋದಿ ಮಾತು
08:07 August 15
ಸವಾಲುಗಳು ಲಕ್ಷಾಂತರವಿದ್ದರೂ ಅದಕ್ಕೆ ಕೋಟಿ ಪರಿಹಾರಗಳನ್ನು ಒದಗಿಸುವ ಶಕ್ತಿ ಭಾರತಕ್ಕಿದೆ
- ಆತ್ಮನಿರ್ಭರ ಭಾರತಕ್ಕೆ ಸಾಕಷ್ಟು ಲಕ್ಷಾಂತರ ಸವಾಲುಗಳಿವೆ ಎಂಬುದನ್ನು ನಾನು ಒಪ್ಪುತ್ತೇನೆ
- ಜಾಗತಿಕ ಸ್ಪರ್ಧಾತ್ಮಕತೆ ಇದ್ದರೆ ಸವಾಲುಗಳು ಇನ್ನಷ್ಟು ಹೆಚ್ಚಾಗಲಿವೆ
- ಸವಾಲುಗಳು ಲಕ್ಷಾಂತರವಿದ್ದರೂ ಅದಕ್ಕೆ ಕೋಟಿ ಪರಿಹಾರಗಳನ್ನು ಒದಗಿಸುವ ಶಕ್ತಿ ದೇಶಕ್ಕಿದೆ
- ಪರಿಹಾರಕ್ಕೆ ಶಕ್ತಿ ತುಂಬುವವರು ನನ್ನ ದೇಶವಾಸಿಗಳು ಎಂದ ಪ್ರಧಾನಿ
07:54 August 15
ಚೀನಾಗೆ ಪರೋಕ್ಷವಾಗಿ ಎಚ್ಚರಿಕೆ ಕೊಟ್ಟ ಮೋದಿ
- ವಿಶ್ವದಲ್ಲಿ ಸಾಮ್ರಾಜ್ಯಶಾಹಿ ಗುರಿ ಇಟ್ಟುಕೊಂಡುವವರು ಯಾರೂ ಉಳಿದಿಲ್ಲ
- ಸಾಮ್ರಾಜ್ಯಶಾಹಿತ್ವವನ್ನು ಭಾರತ ಈಗಾಗಲೇ ಒಂದು ಬಾರಿ ಸೋಲಿಸಿದೆ
- ಚೀನಾಗೆ ಪರೋಕ್ಷವಾಗಿ ಎಚ್ಚರಿಕೆ ಕೊಟ್ಟ ಮೋದಿ
07:54 August 15
ಆತ್ಮನಿರ್ಭರದ ಕನಸು ನನಸಾಗಲು ಎಲ್ಲರೂ ಶ್ರಮಿಸಬೇಕು
- ಕೊರೊನಾ ಮಹಾಮಾರಿ ನಡುವೆ ಆತ್ಮನಿರ್ಭರ ಭಾರತದ ಗುರಿ ಹೊಂದಲಾಗಿದೆ
- ಆತ್ಮನಿರ್ಭರದ ಕನಸು ನನಸಾಗಲು ಎಲ್ಲರೂ ಶ್ರಮಿಸಬೇಕು
- ದೇಶವನ್ನ ಸ್ವಾವಲಂಬಿ ಮಾಡಲು ನಾವೆಲ್ಲರೂ ಒಂದೆಜ್ಜೆ ಮುಂದಿಡಬೇಕೆಂದ ನಮೋ
07:52 August 15
ಕೋವಿಡ್ ವಾರಿಯರ್ಸ್ಗೆ ಕೃತಜ್ಞತೆ
- ಈ ಬಾರಿ ನನ್ನ ಮುಂದೆ ಮಕ್ಕಳು ಕಾಣಿಸುತ್ತಿಲ್ಲ
- ಕೊರೊನಾ ಎಲ್ಲರನ್ನು, ಎಲ್ಲವನ್ನು ತಡೆಹಿಡಿದಿದೆ
- 'ಸೇವೆಯೇ ಪರಮೋ ಧರ್ಮ' ಎಂದು ಕೋವಿಡ್ ವಾರಿಯರ್ಸ್ ಹೋರಾಡುತ್ತಿದ್ದಾರೆ
- ಅವರಿಗೆ ಕೃತಜ್ಞತೆ ಸಲ್ಲಿಸುವೆ ಎಂದ ನಮೋ
07:43 August 15
ಧ್ವಜಾರೋಹಣದ ಬಳಿಕ ದೇಶವನ್ನುದ್ದೇಶಿ ಪ್ರಧಾನಿ ಮೋದಿ ಮಾತು
- ಇಂದು ದೇಶದ ಯೋಧರನ್ನ, ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವ ದಿನ
- ನಮಗೆ ಭದ್ರತೆ ಒದಗಿಸುವ ಸೇನಾ, ಪೊಲೀಸ್ ಸಿಬ್ಬಂದಿಗೆ ಗೌರವ ಸೂಚಿಸುವ ದಿನ
- ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಜಯ ಸಿಗಲಿದೆ
- ದೇಶದ ಹಲವೆಡೆ ಪ್ರವಾಹ ಪರಿಸ್ಥಿತಿ ಎದುರಾಗಿದೆ
- ಮುಂದಿನ ವರ್ಷ 75ನೇ ಸ್ವಾತಂತ್ರ್ಯ ದಿನ ಆಚರಿಸಲಿದ್ದೇವೆ
- ಆ ವೇಳೆಗೆ ನಮ್ಮ ಗುರಿ ತಲುಪಬೇಕು
- ಧ್ವಜಾರೋಹಣದ ಬಳಿಕ ದೇಶವನ್ನುದ್ದೇಶಿ ಪ್ರಧಾನಿ ಮೋದಿ ಮಾತು
07:36 August 15
ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ
- ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ
- ನಮೋಗೆ ಸಾಥ್ ನೀಡಿದ ಮೇಜರ್ ಶ್ವೇತಾ ಪಾಂಡೆ
07:30 August 15
ಕೆಂಪು ಕೋಟೆಗೆ ಪ್ರಧಾನಿ ಮೋದಿ ಆಗಮನ
- ದೆಹಲಿಯ ಕೆಂಪು ಕೋಟೆಗೆ ಪ್ರಧಾನಿ ಮೋದಿ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಆಗಮನ
- ಮೋದಿಯನ್ನು ಬರಮಾಡಿಕೊಂಡ ರಕ್ಷಣಾ ಸಚಿವ ರಾಜನಾಥ್ ಸಿಂಗ್
07:21 August 15
ರಾಜ್ಘಾಟ್ನಲ್ಲಿ ಮಹಾತ್ಮಾ ಗಾಂಧಿ ಸ್ಮಾರಕಕ್ಕೆ ಪ್ರಧಾನಿ ಮೋದಿ ನಮನ
- ದೆಹಲಿಯ ರಾಜ್ಘಾಟ್ಗೆ ಪ್ರಧಾನಿ ಮೋದಿ ಭೇಟಿ
- ಮಹಾತ್ಮಾ ಗಾಂಧಿ ಸ್ಮಾರಕಕ್ಕೆ ನಮನ
07:14 August 15
ದೇಶೀಯ ಉತ್ಪನ್ನಗಳನ್ನು ಬಳಸಿ ಭಾರತವನ್ನು ಉತ್ತಂಗಕ್ಕೆ ಕರೆದೊಯ್ಯೋಣ: ಅಮಿತ್ ಶಾ
- ಈ ಬಾರಿಯ ಸ್ವಾತಂತ್ರ್ಯ ದಿನದಂದು ಪ್ರಧಾನಿ ಮೋದಿಯ 'ಸ್ವಾವಲಂಬಿ ಭಾರತ'ದ ಕನಸನ್ನು ನನಸಾಗಿಸಲು ಪ್ರತಿಜ್ಞೆ ಮಾಡೋಣ
- ದೇಶೀಯ ಉತ್ಪನ್ನಗಳನ್ನು ಬಳಸಿ ಭಾರತವನ್ನು ಉತ್ತಂಗಕ್ಕೆ ಕರೆದೊಯ್ಯೋಣ
- ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್
07:01 August 15
ಭಾರತೀಯರಿಗೆ ಶುಭ ಕೋರಿದ ಪಿಎಂ ಮೋದಿ
- ದೇಶದ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭ ಕೋರಿದ ಪ್ರಧಾನಿ ನರೇಂದ್ರ ಮೋದಿ
- ಟ್ವೀಟ್ ಮೂಲಕ ಶುಭಾಶಯ ತಿಳಿಸಿದ ಪಿಎಂ
06:51 August 15
ಭಾರತ ಸ್ವಾವಲಂಬಿ ಆದಾಗಲೇ ಸ್ವಾತಂತ್ರ್ಯ ಎಂಬ ಪದಕ್ಕೆ ನಿಜವಾದ ಅರ್ಥ ಸಿಗತ್ತೆ: ರಾಜನಾಥ್ ಸಿಂಗ್
- ರಕ್ಷಣಾ ಸಚಿವ ರಾಜನಾಥ್ ಸಿಂಗ್ರಿಂದ ಧ್ವಜಾರೋಹಣ
- ದೆಹಲಿಯ ತಮ್ಮ ನಿವಾಸದಲ್ಲಿ ಧ್ವಜಾರೋಹಣ ಮಾಡಿದ ಸಚಿವರು
- ಭಾರತ ಸ್ವಾವಲಂಬಿ ಆದಾಗಲೇ ಸ್ವಾತಂತ್ರ್ಯ ಎಂಬ ಪದಕ್ಕೆ ನಿಜವಾದ ಅರ್ಥ ಸಿಗತ್ತೆ
- ಹೀಗಾಗಿ ನಾವಿಂದು ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವ ಪ್ರತಿಜ್ಞೆ ತೆಗೆದುಕೊಳ್ಳಬೇಕಾಗಿದೆ
- ಧ್ವಜಾರೋಹಣ ಬಳಿಕ ರಾಜನಾಥ್ ಸಿಂಗ್ ಹೇಳಿಕೆ
06:35 August 15
74ನೇ ಸ್ವಾತಂತ್ರ್ಯೋತ್ಸವಕ್ಕೆ ಭಾರತ ಸಜ್ಜು
ಕೊರೊನಾ ಭೀತಿ-ಬಿಕ್ಕಟ್ಟಿನ ನಡುವೆ ದೇಶಾದ್ಯಂತ ಜನರು 74ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ ಧ್ವಜಾರೋಹಣ ನೆರವೇರಿಸಿ, ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.