ಕರ್ನಾಟಕ

karnataka

ETV Bharat / bharat

ಕರ್ನಾಟಕದಲ್ಲಿ 101, ಮಹಾರಾಷ್ಟ್ರದಲ್ಲಿ 302, ಕೇರಳದಲ್ಲಿ 215 ಕೇಸ್​, ಹೆಚ್ಚುತ್ತಲೇ ಇದೆ ಕೋವಿಡ್​-19!

ದೇಶದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಹಲವು ರಾಜ್ಯಗಳಲ್ಲಿ ಒಂದೇ ದಿನ 50ಕ್ಕೂ ಹೆಚ್ಚು ಕೇಸ್​ ಕಂಡು ಬಂದಿವೆ. ಹೀಗಾಗಿ ಆತಂಕ ಮತ್ತಷ್ಟು ಉಲ್ಬಣಗೊಂಡಿದೆ.

COVID19 in Maharashtra
COVID19 in Maharashtra

By

Published : Mar 31, 2020, 8:06 PM IST

ಬೆಂಗಳೂರು:ಡೆಡ್ಲಿ ವೈರಸ್​ ಕೋವಿಡ್​-19 ಕೇಸ್​ಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ದೇಶವನ್ನ ಲಾಕ್​ಡೌನ್​ ಮಾಡಿ ಆದೇಶ ಹೊರಹಾಕಲಾಗಿದ್ದು, ಇದರ ಮಧ್ಯೆ ಕೋಡ ರಕ್ಕಸ ವೈರಸ್​ ಕಂಟ್ರೋಲ್​ ಮಾಡಲು ಸಾಧ್ಯವಾಗ್ತಿಲ್ಲ.

ಕರ್ನಾಟಕದಲ್ಲೂ ಕೋವಿಡ್​-19 ಕೇಸ್​ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಂದು 13 ಹೊಸ ಕೇಸ್​ ಕಂಡು ಬಂದಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು 101 ಪ್ರಕರಣಗಳು ಕಂಡು ಬಂದಿವೆ. ಇದರಲ್ಲಿ 3 ಜನರು ಸಾವನ್ನಪ್ಪಿದ್ದು, 8 ಮಂದಿ ಡಿಸ್ಚಾರ್ಜ್​ ಆಗಿದ್ದಾರೆ.

ಇನ್ನು ಮಧ್ಯಪ್ರದೇಶದಲ್ಲಿ 66 ಕೋವಿಡ್ ಕೇಸ್​ ಕಂಡು ಬಂದಿದ್ದು, ಇಂದೋರ್​​ನಲ್ಲಿ 44 ಪ್ರಕರಣಗಳು ಕಾಣಿಸಿಕೊಂಡಿವೆ. ಇಲ್ಲಿ 5 ಜನರು ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದಲ್ಲಿ ಇಂದು ಒಂದೇ ದಿನ 72 ಹೊಸ ಪ್ರಕರಣ ಕಂಡು ಬಂದಿವೆ. ಮುಂಬೈನಲ್ಲೇ 59 ಕೇಸ್​ಗಳಿದ್ದು, ಒಟ್ಟು ಸೋಂಕಿತರ ಸಂಖ್ಯೆ 302ಕ್ಕೆ ಏರಿಕೆಯಾಗಿದೆ.

ಕೇರಳದಲ್ಲಿ ಇಂದು 7 ಹೊಸ ಕೇಸ್​ಗಳು ಕಂಡು ಬಂದಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 215ಕ್ಕೆ ಏರಿದೆ. ದೆಹಲಿಯಲ್ಲಿ 97 ಪ್ರಕರಣಗಳಿದ್ದು, 24 ಹೊಸ ಕೇಸ್​ಗಳು ಇದಕ್ಕೆ ಸೇರಿಕೊಂಡಿವೆ. ಇನ್ನು ತಮಿಳುನಾಡಿನಲ್ಲಿ ಒಂದೇ ದಿನ 50 ಹೊಸ ಕೋವಿಡ್​ ಕೇಸ್​ ಕಂಡು ಬಂದಿದ್ದು, ಸೋಂಕಿತರ ಸಂಖ್ಯೆ 125ಕ್ಕೆ ಏರಿಕೆಯಾಗಿದೆ.

ABOUT THE AUTHOR

...view details