ಆಂಧ್ರಪ್ರದೇಶ: ಕೊರೊನಾ ಅಟ್ಟಹಾಸಕ್ಕೆ ನೆರೆಯ ರಾಜ್ಯ ಆಂಧ್ರಪ್ರದೇಶ ಕೂಡ ತಲ್ಲಣಗೊಂಡಿದೆ.
ಕೊರೊನಾ ಅವತಾರಕ್ಕೆ ಪಕ್ಕದ ಆಂಧ್ರವೂ ತಲ್ಲಣ: ನಿತ್ಯ 600 ಸೋಂಕಿತ ಪ್ರಕರಣಗಳು ಪತ್ತೆ - ಆಂಧ್ರ ಪ್ರದೇಶ
ನೆರೆಯ ರಾಜ್ಯ ಆಂಧ್ರಪ್ರದೇಶದಲ್ಲಿ ಕಳೆದೊಂದು ವಾರದಿಂದ ನಿತ್ಯ 600ಕ್ಕೂ ಅಧಿಕ ಸೋಂಕಿತರು ಪತ್ತೆಯಾಗುತ್ತಿದ್ದು, ಇದೀಗ ಸೋಂಕಿತರ ಸಂಖ್ಯೆ 14,595ಕ್ಕೆ ಏರಿಕೆಯಾಗಿದೆ.
![ಕೊರೊನಾ ಅವತಾರಕ್ಕೆ ಪಕ್ಕದ ಆಂಧ್ರವೂ ತಲ್ಲಣ: ನಿತ್ಯ 600 ಸೋಂಕಿತ ಪ್ರಕರಣಗಳು ಪತ್ತೆ Andhra pradesh](https://etvbharatimages.akamaized.net/etvbharat/prod-images/768-512-7829291-thumbnail-3x2-megha.jpg)
ಆಂಧ್ರ ಪ್ರದೇಶ ಕೊರೊನಾ
ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಬರೋಬ್ಬರಿ 704 ಕೇಸ್ಗಳು ಹಾಗೂ 7 ಸಾವು ವರದಿಯಾಗಿದೆ. ಈ ಮೂಲಕ ಆಂಧ್ರದಲ್ಲಿ ಸೋಂಕಿತರ ಸಂಖ್ಯೆ 14,595ಕ್ಕೆ, ಮೃತರ ಸಂಖ್ಯೆ 187ಕ್ಕೆ ಏರಿಕೆಯಾಗಿದೆ.
ಕಳೆದೊಂದು ವಾರದಿಂದ ನಿತ್ಯ 600ಕ್ಕೂ ಅಧಿಕ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಈ ಪೈಕಿ ಅನಂತಪುರ, ಚಿತ್ತೂರು, ಪೂರ್ವ ಗೋದಾವರಿ, ಪಶ್ಚಿಮ ಗೋದಾವರಿ, ಗುಂಟೂರು, ಕಡಪ, ಕೃಷ್ಣ, ಕರ್ನೂಲು, ನೆಲ್ಲೂರು, ವಿಶಾಖಪಟ್ಟಣ ಹಾಗೂ ವಿಜಯನಗರದಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗಿವೆ.