ಕರ್ನಾಟಕ

karnataka

ETV Bharat / bharat

70 ವರ್ಷದ ಕಾಮುಕನಿಂದ ಬಾಲಕಿ ಮೇಲೆ ಅತ್ಯಾಚಾರ ಯತ್ನ... ಗ್ರಾಮಸ್ಥರಿಂದ ಗೂಸಾ! - ನೋಯ್ಡಾ ಕ್ರೈಂ ಸುದ್ದಿ

ಬಾಲಕಿಗೆ ಚಾಕೋಲೆಟ್​​ ​ ನೀಡುವ ಆಸೆ ತೋರಿಸಿ, ಅತ್ಯಾಚಾರ ಎಸಗಲು ಯತ್ನಿಸಿದ್ದ ಕಾಮುಕನೊಬ್ಬನನ್ನು ಗ್ರಾಮಸ್ಥರು ರೆಡ್​ಹ್ಯಾಂಡ್​ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಉತ್ತರಪ್ರದೇಶದ ನೋಯ್ಡಾದಲ್ಲಿ ನಡೆದಿದೆ.

ಕಾಮುಕನಿಗೆ ಗೂಸಾ

By

Published : Sep 28, 2019, 4:10 PM IST

ನೋಯ್ಡಾ: 70 ವರ್ಷದ ಕಾಮುಕನೊಬ್ಬ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ವೇಳೆ ಸ್ಥಳೀಯರು ಹಿಡಿದು ಆತನಿಗೆ ಗೂಸಾ ನೀಡಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದೆ.

ನೋಯ್ಡಾದ ನೇಥಾರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನ ಸಂಭುದಯಲ್ ಎಂದು ಗುರುತಿಸಲಾಗಿದೆ. ಗ್ರಾಮದಲ್ಲಿ ತಂಪು ಪಾನಿಯ ಅಂಗಡಿ ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದ ಈತ 10 ವರ್ಷದ ಬಾಲಕಿ ಕೈಯಲ್ಲಿ 20 ರೂಪಾಯಿ ಕೊಟ್ಟು ತನ್ನ ಶಾಪ್​ನೊಳಗೆ ಕರೆದುಕೊಂಡು ಹೋಗಿ ಕೃತ್ಯವೆಸಗಲು ಮುಂದಾದಾಗ, ಗ್ರಾಮಸ್ಥರು ರೆಡ್​​ಹ್ಯಾಂಡ್ ಆಗಿ ಹಿಡಿದು ಗೂಸಾ ನೀಡಿದ್ದಾರೆ.

ತದನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಾಲಕಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಕಾಮುಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಇನ್ನು ಪೊಲೀಸರು ತಿಳಿಸಿರುವ ಪ್ರಕಾರ, ಬಾಲಕಿ ತಂದೆ-ತಾಯಿ ಕೆಲಸಕ್ಕೆ ತೆರಳುತ್ತಿದ್ದಂತೆ ಮನೆಯಲ್ಲಿರುತ್ತಿದ್ದ ಬಾಲಕಿಗೆ ಚಾಕಲೋಟ್​ ನೀಡಿ ತನ್ನ ಅಂಗಡಿಗೆ ಕರೆಯಿಸಿಕೊಳ್ಳುತ್ತಿದ್ದನು ಎಂದು ತಿಳಿದು ಬಂದಿದೆ.

ABOUT THE AUTHOR

...view details