ಶ್ರೀನಗರ(ಜಮ್ಮು-ಕಾಶ್ಮೀರ):ಕಳೆದ ಎರಡು ವರ್ಷಗಳಿಂದ 7 ವರ್ಷದ ಬಾಲಕಿವೋರ್ವಳು ಶ್ರೀನಗರದ ಪ್ರಸಿದ್ಧ ದಾಲ್ ಸರೋವರ ಸ್ವಚ್ಛಗೊಳಿಸುತ್ತಿದ್ದು, ಆಕೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಹೈದರಾಬಾದ್ ಮೂಲದ ಶಾಲೆಯವೊಂದು ತನ್ನ ಪಠ್ಯಕ್ರಮದಲ್ಲಿ ಆಕೆಯ ಜೀವನದ ಭಾಗವನ್ನ ಅಳವಡಿಸಿಕೊಂಡು ಪ್ರಕಟಿಸಿದ್ದು, ಇದೀಗ ಅದು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಲಿದೆ.
ಎರಡು ವರ್ಷದಿಂದ 'ದಾಲ್ ಸರೋವರ' ಸ್ವಚ್ಛ ಮಾಡ್ತಿರುವ 7 ವರ್ಷದ ಪೋರಿ... ಇದೀಗ ಪುಸ್ತಕದಲ್ಲಿ ಪಠ್ಯ! - 7 ವರ್ಷದ ಬಾಲಕಿ ಜನ್ನತ್
ಜಮ್ಮು-ಕಾಶ್ಮೀರದ ಪ್ರಮುಖ ಪ್ರವಾಸಿ ಸ್ಥಳ ದಾಲ್ ಸರೋವರವನ್ನ ಕಳೆದ ಎರಡು ವರ್ಷಗಳಿಂದ ಸ್ವಚ್ಛಗೊಳಿಸುತ್ತಿರುವ ಏಳು ವರ್ಷದ ಬಾಲಕಿಯ ಜೀವನಗಾಥೆ ಇದೀಗ ಹೈದರಾಬಾದ್ ಪಠ್ಯಪುಸ್ತಕದಲ್ಲಿ ಮೂಡಿ ಬಂದಿದೆ.
![ಎರಡು ವರ್ಷದಿಂದ 'ದಾಲ್ ಸರೋವರ' ಸ್ವಚ್ಛ ಮಾಡ್ತಿರುವ 7 ವರ್ಷದ ಪೋರಿ... ಇದೀಗ ಪುಸ್ತಕದಲ್ಲಿ ಪಠ್ಯ! 7-yr-old Jannat](https://etvbharatimages.akamaized.net/etvbharat/prod-images/768-512-7755709-thumbnail-3x2-wdfdfdf.jpg)
ಐದು ವರ್ಷದವಳಾದಾಗಿನಿಂದಲೂ ಜನ್ನತ್ ಈ ಕೆಲಸ ತಪ್ಪದೇ ಮಾಡ್ತಿದ್ದು, ಅನೇಕರಿಗೆ ಸ್ಫೂರ್ತಿಯಾಗಿದ್ದಾಳೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಏಳು ವರ್ಷದ ಬಾಲಕಿ, ತನ್ನ ತಂದೆಯಿಂದಲೇ ಪ್ರೇರಣೆ ಪಡೆದು ಈ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದಾಳೆ. ಈ ಮಹತ್ವಪೂರ್ಣ ಕೆಲಸಕ್ಕಾಗಿ ಈಗಾಗಲೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ಮೆಚ್ಚುಗೆ ಪಡೆದುಕೊಂಡಿರುವ ಜನ್ನತ್ ಈಗಾಗಲೇ ಎಲ್ಲರಿಂದಲೂ ಪ್ರಶಂಸೆ ಪಡೆದುಕೊಂಡಿದ್ದಾಳೆ. ಈ ಹಿಂದೆ 2018ರಲ್ಲಿ ಈಕೆ ದಾಲ್ ಸರೋವರ್ ಸ್ವಚ್ಛ ಮಾಡ್ತಿದ್ದ ವಿಡಿಯೋವೊಂದು ವೈರಲ್ ಆಗಿತ್ತು.
'ಶ್ರೀನಗರದ ರತ್ನ' ಎಂದೇ ಖ್ಯಾತವಾಗಿರುವ ದಾಲ್ ಸರೋವರ ಕಾಶ್ಮೀರದ ಎರಡನೆಯ ದೊಡ್ಡ ಸರೋವರ. ಇದು 26 ಚದರ ಕಿಲೋಮೀಟರ್ಗಳಷ್ಟು ವಿಸ್ತಾರವಾಗಿ ಹರಡಿದೆ. ಜಮ್ಮು-ಕಾಶ್ಮೀರದ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿರುವ ಈ ಸರೋವರ ಸಮುದ್ರ ಮಟ್ಟದಿಂದ 1775 ಮೀಟರ್ ಎತ್ತರದಲ್ಲಿದೆ.