ವಡೋದರ(ಗುಜರಾತ್): ಇಲ್ಲಿನ ಹೋಟೆಲ್ ಒಂದರ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ಉಸಿರುಗಟ್ಟಿ 7 ಜನ ಸಾವಿಗೀಡಾಗಿದ್ದಾರೆ.
ಟ್ಯಾಂಕ್ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ 7 ಜನ ಸಾವು! - undefined
ಗುಜರಾತ್ನಲ್ಲಿ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ಉಸಿರುಗಟ್ಟಿ 7 ಜನ ಸಾವಿಗೀಡಾಗಿದ್ದಾರೆ
ಉಸಿರುಗಟ್ಟಿ 7 ಜನ ಸಾವು
ವಡೋದರ ನಗರದಿಂದ 30 ಕಿಲೋ ಮೀಟರ್ ದೂರದ ಹಳ್ಳಿಯೊಂದರಲ್ಲಿದ್ದ ಹೋಟೆಲ್ನ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ಈ ದುರ್ಘಟನೆ ಸಂಭವಿಸಿದೆ.
ಒಳಚರಂಡಿ ಸ್ವಚ್ಛಗೊಳಿಸಲು ಬಂದಿದ್ದ 4 ಕಾರ್ಮಿಕರು ಸೇರಿದಂತೆ ಹೋಟೆಲ್ನ ಮೂವರು ಕಾರ್ಮಿಕರು ಕೂಡ ಸಾವಿಗೀಡಾಗಿದ್ದಾರೆ. ಮೊದಲು ಟ್ಯಾಂಕ್ ಸ್ವಚ್ಛಗೊಳಿಸಲು ಇಳಿದಿದ್ದ ಕಾರ್ಮಿಕರು ತುಂಬಾ ಸಮಯ ಕಳೆದರೂ ಮೇಲೆ ಬಾರದ ಕಾರಣ ಮತ್ತೆ ಕೆಲವರು ಒಳಗೆ ಇಳಿದಿದ್ದಾರೆ. ದುರಾದೃಷ್ಟವಶಾತ್ ಅವರೂ ಕೂಡ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.