ಜೈಪುರ(ರಾಜಸ್ಥಾನ):ಇರಾನ್ನಿಂದ ಭಾರತಕ್ಕೆ ಸ್ಥಳಾಂತರವಾಗಿದ್ದ ಏಳು ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ರಾಜಸ್ಥಾನದ ಆರೋಗ್ಯ ವಿಭಾಗದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಇರಾನ್ನಿಂದ ಸ್ಥಳಾಂತರವಾಗಿದ್ದ 7 ಮಂದಿಯಲ್ಲಿ ಕೊರೊನಾ ಸೋಂಕು: ರಾಜಸ್ಥಾನದಲ್ಲಿ ಆತಂಕ - ರೋಹಿತ್ ಕುಮಾರ್ ಸಿಂಗ್
ಇರಾನ್ನಿಂದ ಸ್ಥಳಾಂತರವಾಗಿದ್ದಏಳು ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ರಾಜಸ್ಥಾನದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರೋಹಿತ್ಕುಮಾರ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಕೆಲ ದಿನಗಳ ಹಿಂದೆ ಇರಾನ್ನಿಂದ ರಾಜಸ್ಥಾನಕ್ಕೆ ಸ್ಥಳಾಂತರವಾಗಿದ್ದರು. ಅವರನ್ನು ರಾಜಸ್ಥಾನದ ವೈದ್ಯರು ನಿಗಾದಲ್ಲಿರಿಸಿ ಪರೀಕ್ಷೆ ನಡೆಸಿದ್ದರು. ಈಗ ಅವರಲ್ಲಿ ಒಟ್ಟು ಏಳು ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಇದರಿಂದ ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 83ಕ್ಕೆ ಏರಿಕೆಯಾಗಿದೆ ಎಂದು ರೋಹಿತ್ಕುಮಾರ್ ಸಿಂಗ್ ತಿಳಿಸಿದ್ದಾರೆ.
ಇಂದು ಝುಂಝುನು ಮೂಲದ 44 ವರ್ಷದ ವ್ಯಕ್ತಿ, ಅಜ್ಮೀರ್ನ 17 ವರ್ಷದ ಬಾಲಕಿ, ಡುಂಗಾರ್‌ಪುರದ 65 ವರ್ಷದ ವ್ಯಕ್ತಿ ಸೇರಿದಂತೆ ನಾಲ್ಕು ಹೊಸ ಪ್ರಕರಣಗಳು ಪತ್ತೆಯಾಗಿವೆ. ಈವರೆಗೂ ರಾಜ್ಯದಲ್ಲಿ ಕೊರೊನಾ ಕಾರಣಕ್ಕೆ ಯಾರೊಬ್ಬರೂ ಮೃತಪಟ್ಟಿಲ್ಲ. ಮೂವರಿಗೆ ಚಿಕಿತ್ಸೆ ನೀಡಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.