ಚತ್ತೀಸ್ಗಢ: ರಾಜ್ನಂದಗಾವ್ನ ಸೀತಾಗೋಟ ಅರಣ್ಯ ಪ್ರದೇಶದಲ್ಲಿ ಜಿಲ್ಲಾ ಮೀಸಲು ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ 7 ನಕ್ಸಲರು ಮೃತಪಟ್ಟಿದ್ದಾರೆ.
ಭದ್ರತಾ ಪಡೆ ದಾಳಿಗೆ 7 ನಕ್ಸಲರು ಹತ: ಅಪಾರ ಶಸ್ತ್ರಾಸ್ತ್ರ ವಶ - ನಕ್ಸಲ್ ನಿಗ್ರಹ ಕಾರ್ಯಾಚರಣೆ
ಜಿಲ್ಲಾ ಮೀಸಲು ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ 7 ನಕ್ಸಲರು ಮೃತಪಟ್ಟಿರುವ ಘಟನೆ ಛತ್ತೀಸ್ಗಢದ ರಾಜ್ನಂದಗಾವ್ನ ಸೀತಾಗೋಟ ಅರಣ್ಯ ಪ್ರದೇಶದಲ್ಲಿ ಇಂದು ನಡೆದಿದೆ.
![ಭದ್ರತಾ ಪಡೆ ದಾಳಿಗೆ 7 ನಕ್ಸಲರು ಹತ: ಅಪಾರ ಶಸ್ತ್ರಾಸ್ತ್ರ ವಶ](https://etvbharatimages.akamaized.net/etvbharat/prod-images/768-512-4027680-thumbnail-3x2-gggg.jpg)
Naxals
ಇಂದು ಬೆಳಗ್ಗೆ 6 ಗಂಟೆಗೆ ಭದ್ರತಾ ಪಡೆ ನಕ್ಸಲರ ಮೇಲೆ ಗುಂಡಿನ ದಾಳಿ ನಡೆಸಿತು. ಈ ವೇಳೆ 7 ನಕ್ಸಲರು ಮೃತಪಟ್ಟಿದ್ದು, ಎಕೆ47 ಸೇರಿದಂತೆ ಅಪಾರ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.
ಸದ್ಯ ಕಾರ್ಯಾಚರಣೆ ಮುಂದುವರೆದಿದೆ. ಕೆಲ ದಿನಗಳಿಂದ ಭದ್ರತಾಪಡೆ ನಕ್ಸಲ ನಿಗ್ರಹ ಕಾರ್ಯಾಚರಣೆ ತೀವ್ರಗೊಳಿಸಿದ್ದು, ಹಲವು ನಕ್ಸಲರು ಹತರಾಗಿದ್ದಾರೆ.