ಲತೇಹಾರ್(ಜಾರ್ಖಂಡ್): ಪೊಲೀಸ್ ಮತ್ತು ಗಸ್ತು ಸಿಬ್ಬಂದಿ ಮೇಲೆ ಚಾಂದ್ವಾದಲ್ಲಿ ನವೆಂಬರ್ 22ರಂದು ದಾಳಿ ನಡೆಸಿದ್ದ 7 ನಕ್ಸಲರನ್ನು ಬಂಧಿಸುವಲ್ಲಿ ಜಾರ್ಖಂಡ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಜಾರ್ಖಂಡ್ ಪೊಲೀಸರಿಂದ 7 ಮಂದಿ ನಕ್ಸಲರ ಬಂಧನ - ಜಾರ್ಖಂಡ್ ನಕ್ಸಲರು
ನವೆಂಬರ್ 22ರಂದು ಪೊಲೀಸರ ಮೇಲೆ ದಾಳಿ ನಡೆಸಿ ಹತ್ಯೆಗೈದಿದ್ದ 7 ನಕ್ಸಲರನ್ನು ಜಾರ್ಖಂಡ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
7 ನಕ್ಸಲರ ಬಂಧನ
ನವೆಂಬರ್ 22ರಂದು ನಕ್ಸಲರ ತಂಡವೊಂದು ಪೊಲೀಸ್ ಹಾಗೂ ಗಸ್ತು ಸಿಬ್ಬಂದಿ ಮೇಲೆ ದಾಳಿ ನಡಸಿ 4 ಪೊಲೀಸರನ್ನು ಬಲಿ ಪಡೆದುಕೊಂಡಿತ್ತು. ಇನ್ನು ಈ ನಕ್ಸಲರನ್ನು ಬಂಧಿಸಲು ಪೊಲೀಸರು ತೀವ್ರ ಶೋಧ ನಡೆಸಿದ್ದರು.
ಸೋಮಾವಾರದಂದು ತ್ರಿತೀಯ ಪ್ರಸ್ತುತಿ ಕಮಿಟಿಯು(ಟಿಪಿಸಿ) ಈ ನಕ್ಸಲರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಬಾಲುನಾಥ್ನ ಗಡಿ ಭಾಗದಲ್ಲಿ ನಕ್ಸಲರು ಸಂಚರಿಸುತ್ತಿದ್ದ ವೇಳೆ ಪೊಲೀಸರು 7 ಮಂದಿ ನಕ್ಸಲರನ್ನು ಬಂಧಿಸಿದ್ದಾರೆ.