ಕರ್ನಾಟಕ

karnataka

ETV Bharat / bharat

ರೆಮ್​ಡೆಸಿವಿರ್ ಇಂಜೆಕ್ಷನ್​ ಅಕ್ರಮ ಮಾರಾಟ: 7 ಜನರ ಬಂಧನ - ರೆಮ್ಡೆಸಿವಿರ್

ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚು ವ್ಯಾಪಿಸುತ್ತಿದ್ದು, ಈ ನಡುವೆ ಸೋಂಕಿತರಿಗೆ ಚಿಕಿತ್ಸೆ ನೀಡಲು ಬಳಸುತ್ತಿರುವ ಔಷಧಿಗೂ ಬೇಡಿಕೆ ಹೆಚ್ಚಾಗಿದೆ. ಇದನ್ನೇ ದುರ್ಬಳಕೆ ಮಾಡಿಕೊಂಡಿರುವ ಕೆಲವರು ಇದನ್ನು ಅಕ್ರಮವಾಗಿ ಮಾರಾಟ ಮಾಡಿ ಹಣ ಮಾಡುವ ದಂಧೆಯಲ್ಲಿ ತೊಡಗಿದ್ದಾರೆ.

remdesivir
ರೆಮ್ಡೆಸಿವಿರ್

By

Published : Jul 19, 2020, 1:26 PM IST

ಮುಂಬೈ: ಕೊರೊನಾ ಸೋಂಕಿತ ರೋಗಿಗಳ ಚಿಕಿತ್ಸೆಗಾಗಿ ಬಳಸುವ ರೆಮ್​ಡೆಸಿವಿರ್ ​ಇಂಜೆಕ್ಷನ್​ಗಳ ಅಕ್ರಮ ಮಾರಾಟ ವಿಚಾರವಾಗಿ ಆಹಾರ ಮತ್ತು ಔಷಧ ನಿಯಂತ್ರಣ ಮಂಡಳಿ (ಎಫ್‌ಡಿಎ)ಯು ಮುಂಬೈನ ಮುಲುಂದ್​ನಲ್ಲಿ ಏಳು ಜನ ಆರೋಪಿಗಳನ್ನು ಬಂಧಿಸಿದೆ.

ತಮಗೆ ಬಂದ ಸುಳಿವಿನ ಆಧಾರದಲ್ಲಿ ಕಾರ್ಯಪ್ರವೃತ್ತರಾದ ಎಫ್​ಡಿಎ ಅಧಿಕಾರಿಗಳು, ಗ್ರಾಹಕರಂತೆ ಮಾರುವೇಷದಲ್ಲಿ ಬಂದು ಇಂಜೆಕ್ಷನ್​ಅನ್ನು ಅಕ್ರಮ ಮಾರುಕಟ್ಟೆ ಮಾಡುತ್ತಿದ್ದ ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ರೆಮ್ಡೆಸಿವಿರ್ ಇಂಜೆಕ್ಷನ್

ಅಧಿಕಾರಿಗಳು ಚುಚ್ಚುಮದ್ದನ್ನು ವಶಪಡಿಸಿಕೊಂಡಿದ್ದು, ಗ್ಯಾಂಗ್‌ನಲ್ಲಿ ಓರ್ವ ಫಾರ್ಮಾಸಿಸ್ಟ್​ ಕೂಡಾ ಇದ್ದಾನೆ ಎಂಬ ಮಾಹಿತಿಯನ್ನು ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ. ಅಲ್ಲದೆ 5,400 ರೂ.ಗಳ ಇಂಜೆಕ್ಷನ್​ಅನ್ನು ಸುಮಾರು 30,000 ದಿಂದ 40,000 ರೂ.ಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ವರದಿಯಾಗಿದೆ.

ರೆಮ್ಡೆಸಿವಿರ್ ಔಷಧಿ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಫ್​ಡಿಎ ಆಯುಕ್ತ ಅರುಣ್ ಉನ್ಹಲೆ, ಔಷಧಿಗಳ ಬ್ಲ್ಯಾಕ್​ ಮಾರ್ಕೆಟಿಂಗ್​ನಲ್ಲಿ ತೊಡಗಿದ್ದ 7 ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಈ ಹಿಂದೆ, ರೆಮ್ಡೆಸಿವಿರ್ ಚುಚ್ಚುಮದ್ದನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡಿದ್ದಕ್ಕಾಗಿ ಮೀರಾ ರಸ್ತೆಯಿಂದ ಇಬ್ಬರನ್ನು ಬಂಧಿಸಲಾಗಿತ್ತು.

ABOUT THE AUTHOR

...view details