ಬಿಲ್ವಾರ(ರಾಜಸ್ಥಾನ):ಜಿಲ್ಲೆಯ ಚಿತ್ತೋರಗಡ-ಕೋಟಾ ರಾಷ್ಟ್ರೀಯ ಹೆದ್ದಾರಿ 27ರ ಕೇಸರ್ಪುರ ಬಳಿ ವ್ಯಾನ್ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿದ್ದು, ವ್ಯಾನ್‌ನಲ್ಲಿದ್ದ 7 ಜನರು ಸಾವನ್ನಪ್ಪಿದ್ದಾರೆ.
ಭೀಕರ ರಸ್ತೆ ಅಪಘಾತ... 7 ಮಂದಿ ದಾರುಣ ಸಾವು - ರಸ್ತೆ ಅಪಘಾತದಲ್ಲಿ 7 ಮಂದಿ ಸಾವು
ರಾಜಸ್ಥಾನದ ಬಿಲ್ವಾರಾ ಜಿಲ್ಲೆಯಲ್ಲಿ ಲಾರಿ ಮತ್ತು ವ್ಯಾನ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 7 ಮಂದಿ ದಾರುಣವಾಗಿ ಸಾವಿಗೀಡಾಗಿದ್ದಾರೆ.
ಬಿಲ್ವಾರಾ ಜಿಲ್ಲೆಯ ಮೂಲಕ ಹಾದುಹೋಗುವ ಚಿತ್ತೋರಗಡ-ಕೋಟಾ ರಾಷ್ಟ್ರೀಯ ಹೆದ್ದಾರಿ 27 ರಲ್ಲಿ ಮಾರುತಿ ವ್ಯಾನ್ ಮತ್ತು ಲಾರಿ ಡಿಕ್ಕಿಯಾಗಿವೆ. ಅಪಘಾತದ ತೀವ್ರತೆಗೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಚಿಕಿತ್ಸೆಯ ಸಮಯದಲ್ಲಿ ಆಸ್ಪತ್ರೆಯಲ್ಲಿ 4 ಮಂದಿ ಅಸುನೀಗಿದ್ದಾರೆ. ಘಟನೆಯ ಮಾಹಿತಿ ಪಡೆದ ಬಿಜೌಲಿಯಾ ಪೊಲೀಸ್ ಠಾಣೆ ಅಧಿಕಾರಿ ವಿನೋದ್ ಕುಮಾರ್ ಮೀನಾ ಸ್ಥಳಕ್ಕೆ ತೆರಳಿ ಮೃತ ದೇಹಗಳನ್ನು ಬಿಜೌಲಿಯಾ ಸಮುದಾಯ ಆಸ್ಪತ್ರೆಗೆ ಸಾಗಿಸಿದ್ದಾರೆ.
ವ್ಯಾನ್‌ನಲ್ಲಿದ್ದ ಆರು ಜನರು ಬಿಲ್ವಾರಾ ಜಿಲ್ಲೆಯ ಬಿಗೋಡ್ ಪೊಲೀಸ್ ಠಾಣೆ ವ್ಯಾಪ್ತಿಯ ಸಿಂಗೋಲಿ ಗ್ರಾಮದವರು. ವ್ಯಾನ್‌ನಲ್ಲಿದ್ದ ಪ್ರಯಾಣಿಕರೆಲ್ಲರೂ ಕೋಟಾ ಜಿಲ್ಲೆಯ ರಾವತ್‌ಭಾಟಾಗೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ.