ಕರ್ನಾಟಕ

karnataka

ETV Bharat / bharat

'ಜಾಲಿ' ಬೇಲಿ ಸರಿಸಿದ ಕೇರಳ ಪೊಲೀಸರಿಗೆ ಸಿಕ್ತು ಮತ್ತೊಂದು ಪ್ರಕರಣ.. ಆಸ್ತಿಗಾಗಿ ಕೊಲೆಯಾದ್ರಾ 7 ಮಂದಿ? - ಕರಮನ ಕುಟುಂಬದಲ್ಲಿ ಏಳು ಸಾವು ಸುದ್ದಿ

ಕೇರಳದ ಕೋಯಿಕೋಡ್​ನ ಕೂಡತಾಯಿಯಲ್ಲಿ ಜಾಲೀ ಎಂಬ ಸೈಕೋ ಮಹಿಳೆ ಕುಟುಂಬಸ್ಥರನ್ನು ಕೊಲೆ ಮಾಡಿರುವ ಘಟನೆ ಬೆನ್ನಿಗೇ ದೇವರ ನಾಡಲ್ಲಿ ಇಂತಹ ಮತ್ತೊಂದು ಘಟನೆ ವರದಿಯಾಗಿದೆ.

ಮತ್ತೊಂದು ಹತ್ಯೆ ಪ್ರಕರಣ ಬೆಳಕಿಗೆ

By

Published : Oct 28, 2019, 9:03 AM IST

ತಿರುವನಂತಪುರಂ:ಕೇರಳದ ಕೋಯಿಕೋಡ್​ನ ಕೂಡತಾಯಿಯಲ್ಲಿ ಜಾಲೀ ಎಂಬ ಸೈಕೋ ಮಹಿಳೆ ಕುಟುಂಬಸ್ಥರನ್ನು ಕೊಲೆ ಮಾಡಿರುವ ಘಟನೆ ಬೆನ್ನಿಗೇ ದೇವರ ನಾಡಲ್ಲಿ ಇಂತಹ ಮತ್ತೊಂದು ಘಟನೆ ವರದಿಯಾಗಿದೆ.

ತಿರುವನಂತಪುರಂನ ಕರಮನ ಪಟ್ಟಣದಲ್ಲಿ ಗೋಪಿನಾಥ್​ ಎಂಬ ವ್ಯಕ್ತಿಯ ಕುಟುಂಬದ ಏಳು ಜನರು ಅನುಮಾನಸ್ಪದವಾಗಿ ಮೃತಪಟ್ಟಿದ್ದಾರೆ. ಕಳೆದ 15 ವರ್ಷಗಳ ಹಿಂದೆ ಇವರೆಲ್ಲರೂ ಸಾವಿಗೀಡಾಗಿದ್ದಾಗಿ ಗೋಪಿನಾಥ್​ ಕುಟಂಬಕ್ಕೆ ಸೇರಿದ ಪ್ರಸನ್ನ ಕುಮಾರಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಗೋಪಿನಾಥ್​ ಸೇರಿ ಆತನ ಹೆಂಡತಿ, ಸುಖಮಿಯಮ್ಮ, ಮಕ್ಕಳಾದ ಜಯಶ್ರೀ, ಜಯಬಾಲ ಕ್ರಿಷ್ಣನ್​, ಜಯಪ್ರಕಾಶ್​, ಸಂಬಂಧಿಕರಾದ ಉನ್ನಿಕೃಷ್ಣನ್​, ಜಯಮಾಧವನ್​ ಸೇರಿ ಏಳು ಜನರನ್ನು ಸಂಬಂಧಿಕರೇ ಕೊಲೆ ಮಾಡಿ, 50 ಕೋಟಿಗೂ ಹೆಚ್ಚು ಬೆಲೆ ಬಾಳುವ ಆಸ್ತಿಯನ್ನು ಲಪಟಾಯಿಸಿದ್ದಾರೆ ಎಂದು ಪ್ರಸನ್ನ ಕುಮಾರಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಡಿಜಿಪಿ ಲೋಕನಾಥ್​ ಬೆಹ್ರಾ, ಈ ಹತ್ಯೆಗಳ ಹಿಂದೆ ನಿಗೂಢ ರಹಸ್ಯ ಅಡಗಿದೆ. ಆದಷ್ಟುಬೇಗ ಈ ಪ್ರಕರಣವನ್ನು ಭೇದಿಸುತ್ತೇವೆ ಎಂದು ಹೇಳಿದ್ದಾರೆ.

ABOUT THE AUTHOR

...view details